ಮನೆ, ಕಾರು, ಟೀವಿ, ರೆಫ್ರಿಜರೇಟರ್, ಮೊಬೈಲ್ ಫೋನ್‌ಗಳನ್ನು ಮಾಸಿಕ ಕಂತುಗಳಲ್ಲಿ ಖರೀದಿಸುವ ಆಯ್ಕೆ ಹಳತಾಯಿತು.

ದುಬೈ: ಮನೆ, ಕಾರು, ಟೀವಿ, ರೆಫ್ರಿಜರೇಟರ್, ಮೊಬೈಲ್ ಫೋನ್‌ಗಳನ್ನು ಮಾಸಿಕ ಕಂತುಗಳಲ್ಲಿ ಖರೀದಿಸುವ ಆಯ್ಕೆ ಹಳತಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಮುಂದೆ ವಿಮಾನ ಟಿಕೆಟ್‌ಗಳನ್ನೂ ‘ಇಎಂಐ’ (ಮಾಸಿಕ ಸಮಾನ ಕಂತು) ಆಯ್ಕೆಯಡಿ ಖರೀದಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮೂಲದ ಎತಿಹಾದ್ ಏರ್‌ವೇಸ್ ಆರಂಭಿಸಿದೆ.

‘ಈಗ ವಿಮಾನದಲ್ಲಿ ಪ್ರಯಾಣಿಸಿ, ಬಳಿಕ ಪಾವತಿಸಿ’ ಎಂಬ ಯೋಜನೆ ಇದಾಗಿದೆ. ಇದರಡಿ ಆನ್‌ಲೈನ್ ಮೂಲಕ ವಿಮಾನ ಟಿಕೆಟ್ ಕಾದಿರಿಸುವವರು ‘ಕಂತುಗಳಲ್ಲಿ ಪಾವತಿ’ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.