Asianet Suvarna News Asianet Suvarna News

ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಚಾಲಾಕಿ ಚಾಲಕನ ಪತ್ನಿ ಎಲ್ವಿನ್!

ಕೆ. ಆರ್ ಪುರ ಉಪ ವಿಭಾಗದ ರವಿ ಕುಮಾರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ವಿನ್'ಳನ್ನು ಬಂಧಿಲಾಗಿದೆ. ಇದೇ ತಿಂಗಳ 23 ರಂದು ಈ ಘಟನೆ ನಡೆದಿತ್ತು.  ವಿಶೇಷವೆಂದರೆ ವಿಚಾರಣೆಯ ಸಂದರ್ಭದಲ್ಲಿ ಡೊಮಿನಿಕ್ ಪತ್ನಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಕದ್ದ ಹಣದಲ್ಲಿ 8 ಲಕ್ಷವನ್ನು ಸಾಲ ಪಡೆದವರಿಗೆ ನೀಡಿರುವುದಾಗಿ ತಿಳಿಸಿದ್ದಾಳೆ.

Elwin Discloses Shocking Information In front Of Police

ಬೆಂಗಳೂರು(ನ.28): ಬೆಂಗಳೂರಿನಲ್ಲಿ 1 ಕೋಟಿ 37 ಲಕ್ಷ ಹಣದ ಜೊತೆ ಎಸ್ಕೇಪ್ ಆಗಿದ್ದ ಕಿಲಾಡಿ ಚಾಲಕನ ಪತ್ನಿಯನ್ನು ಬಂಧಿಸಲಾಗಿದೆ. ಡೊಮಿನಿಕ್ ಪತ್ನಿ ಎಲ್ವಿನ್ ಬಂಧಿತ ಆರೋಪಿ. ಡೊಮಿನಿಕ್ ಪತ್ನಿಯಿಂದ 79 ಲಕ್ಷ 8 ಸಾವಿರ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಕೆ. ಆರ್ ಪುರ ಉಪ ವಿಭಾಗದ ರವಿ ಕುಮಾರ್ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ವಿನ್'ಳನ್ನು ಬಂಧಿಲಾಗಿದೆ. ಇದೇ ತಿಂಗಳ 23 ರಂದು ಈ ಘಟನೆ ನಡೆದಿತ್ತು. ವಿಶೇಷವೆಂದರೆ ವಿಚಾರಣೆಯ ಸಂದರ್ಭದಲ್ಲಿ ಡೊಮಿನಿಕ್ ಪತ್ನಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಕದ್ದ ಹಣದಲ್ಲಿ 8 ಲಕ್ಷವನ್ನು ಸಾಲ ಪಡೆದವರಿಗೆ ನೀಡಿರುವುದಾಗಿ ತಿಳಿಸಿದ್ದಾಳೆ.

ಇನ್ನು ಡೊಮಿನಿಕ್ ಜೊತೆ ಎಲ್ಲೆಲ್ಲಿ ಹೋಗಿದ್ದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟ ಪತ್ನಿ, 'ಕಳ್ಳತನ ಮಾಡಿದ ದಿನ ನನ್ನ ಪತಿ 'ದೊಡ್ಡ ಬ್ಯಾಗ್'ನೊಂದಿಗೆ ಮನೆಗೆ ಬಂದಿದ್ದ. ಬಳಿಕ  ನನ್ನನ್ನು ಮತ್ತು ಮಗನನ್ನು ಬೇಗ ರೆಡಿಯಾಗುವಂತೆ ಹೇಳಿದ್ದಲ್ಲದೆ, ಹಣದೊಂದಿಗೆ ಎಸ್ಕೇಪ್ ಆಗುವ ಬಗ್ಗೆ ವಿವರಿಸಿದ್ದ. ಮನೆಯಿಂದ ನಾವು ಮೆಜೆಸ್ಟಿಕ್'ಗೆ ಆಟೋದಲ್ಲಿ ತೆರಳಿದೆವು. ಅಲ್ಲಿಂದ ಬಸ್ ಮೂಲಕ ಚಿತ್ತೂರು- ವೇಲೂರು ಮಾರ್ಗವಾಗಿ ಚೆನ್ನೈ ತಲುಪಿದೆವು. ಚೆನ್ನೈನಿಂದ ಮತ್ತೆ ಚಾಮಲಮುಡಿ ಚರ್ಚ್'ಗೆ ಭೇಟಿ ನೀಡಿ, ಅಂದು ಅಲ್ಲೇ ತಂಗಿದ್ದೆವು. ಬಳಿಕ ಬೆಂಗಳೂರಿಗೆ ವಾಪಾಸಾದೆವು' ಎಂದು ಹೇಳಿದ್ದಾಳೆ.

ಎಲ್ವಿನ್ ತಾಯಿ ದುಬೈನಲ್ಲಿ ವಾಸವಿದ್ದರು. ಹೀಗಾಗಿ ತಾಯಿಯನ್ನು ನೋಡಲು ಈಕೆ ಕಳೆದ ಒಂದು ತಿಂಗಳ ಹಿಂದೆ ದುಬೈಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಚಾಲಾಕಿ ಚಾಲಕನೊಂದಿಗೆ ಎಲ್ವಿನ್ 1998 ರಿಂದ ಲಿವಿಂಗ್ ರಿಲೇಷನ್'ಶಿಪ್ನಲ್ಲಿದ್ದು, ಇತ್ತೀಚೆಗಷ್ಟೇ ಇವರಿಬ್ಬರ ಮದುವೆಯಾಗಿತ್ತು ಎಂಬ ಮಾಹಿತಿಯೂ ತಿಳಿದು ಬಂದಿದೆ.

Latest Videos
Follow Us:
Download App:
  • android
  • ios