ಭಯಗೊಂಡ ಸ್ಥಳೀಯರು ಕೆಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿವೆ

ಬೆಂಗಳೂರು - ಮೈಸೂರು ಮುಖ್ಯ ರಸ್ತೆಗೆ ಹತ್ತಿರದಲ್ಲೆ ಎರಡು ಆನೆಗಳು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿದೆ.

ನಗರದ ಅಂಚೆಪಾಳ್ಯ , ರಾಜರಾಜೇಶ್ವರಿ ಆಸ್ಪತ್ರೆ , ಕಂಬೀಪುರ ಸುತ್ತ ಆನೆಗಳು ಸಂಚರಿಸಿವೆ. ಭಯಗೊಂಡ ಸ್ಥಳೀಯರು ಕೆಂಗೇರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿವೆ. ಬನ್ನೇರುಘಟ್ಟ ಉದ್ಯಾನ ಕಡೆಯಿಂದ ಆನೆಗಳು ಬಂದಿರುವ ಸಾಧ್ಯತೆಯಿದ್ದು ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.