ರೆಹಮಾನ್ ಖಾನ್, ರಾಜೀವ್ ಚಂದ್ರಶೇಖರ್, ರಾಮಕೃಷ್ಣ,ಬಸವರಾಜ್ ಪಾಟೀಲ್ ಅವರ ಸದಸ್ಯತ್ವದ ಅವಧಿ ಏಪ್ರಿಲ್ ಗೆ ಅಂತ್ಯಗೊಳ್ಳಲಿದೆ. ಮಾ.5ಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು ಮಾ.12  ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದೆ.

ನವದೆಹಲಿ(ಫೆ.23): ರಾಜ್ಯಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ಆಗಿದ್ದು ಕರ್ನಾಟಕ ಸೇರಿ 16 ರಾಜ್ಯಗಳ 58 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯದ ನಾಲ್ವರು ಏಪ್ರಿಲ್ 4ರಂದು ನಿವೃತ್ತಿಗೊಳ್ಳಲಿದ್ದಾರೆ.

ರೆಹಮಾನ್ ಖಾನ್, ರಾಜೀವ್ ಚಂದ್ರಶೇಖರ್, ರಾಮಕೃಷ್ಣ,ಬಸವರಾಜ್ ಪಾಟೀಲ್ ಅವರ ಸದಸ್ಯತ್ವದ ಅವಧಿ ಏಪ್ರಿಲ್ ಗೆ ಅಂತ್ಯಗೊಳ್ಳಲಿದೆ. ಮಾ.5ಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು ಮಾ.12 ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದೆ. ಮಾರ್ಚ್ 13ರಂದು ನಾಮಪತ್ರಗಳ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದ್ದು ಮಾರ್ಚ್ 15 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿರುತ್ತದೆ. ಮಾರ್ಚ್ 23ರಂದು ಬೆಳಗ್ಗೆ 9ಗಂಟೆಯಿಂದ 4ರವರೆಗೆ ಮತದಾನ ಅಂದು ಸಂಜೆ 5 ಗಂಟೆಗೆ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ.