ನವದೆಹಲಿ (ಸೆ.24): ಕೇಂದ್ರ ಚುನಾವಣಾ ಆಯುಕ್ತ ಅಶೋಕ್‌ ಲಾವಾಸ ಅವರ ಪತ್ನಿಗೆ ಆದಾಯ ತೆರಿಗೆ ಇಲಾಖೆ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ.

ಲಾವಾಸ ಅವರು ಚುನಾವಣಾ ಆಯುಕ್ತರಾಗುವ ಮುನ್ನ ಕೇಂದ್ರ ಸರ್ಕಾರದ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ಆ ಸಂದರ್ಭದಲ್ಲಿ ಅವರ ಪತ್ನಿ ಹಲವು ಕಂಪನಿಗಳಲ್ಲಿ ಸ್ವತಂತ್ರ ನಿರ್ದೇಶಕ ಹುದ್ದೆ ಅಲಂಕರಿಸಿದ್ದರು. ಈ ಸಂಬಂಧ ನೋಟಿಸ್‌ ಜಾರಿಯಾಗಿದೆ ಎಂದು ಹೇಳಲಾಗಿದೆ.

ಪಾಸ್ಪೋರ್ಟ್, ಆಧಾರ್ ಇನ್ನು ಒಂದೇ ಕಾರ್ಡಿನಲ್ಲಿ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಲಾವಾಸ ಅವರು ಚುನಾವಣಾ ಆಯೋಗಕ್ಕೇ ಸಡ್ಡು ಹೊಡೆಯುವ ಮೂಲಕ ಸುದ್ದಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ವಿರುದ್ಧ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ 11 ದೂರುಗಳಲ್ಲಿ ಕ್ಲೀನ್‌ಚಿಟ್‌ ನೀಡಿದ್ದ ಆಯೋಗದ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಭಿನ್ನ ನಿಲವನ್ನು ದಾಖಲು ಮಾಡಬೇಕು. ಅಂತಹ ವ್ಯವಸ್ಥೆ ಇಲ್ಲದಿದ್ದ ಮೇಲೆ ಸಭೆಗೇ ಹಾಜರಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಲಾವಾಸ ಬೇಡಿಕೆಯನ್ನು ಆಯೋಗ ತಿರಸ್ಕರಿಸಿತ್ತು.

ಮೋದಿ ವಿರುದ್ಧ ಕ್ರಮವಿಲ್ಲ: ಚುನಾವಣಾ ಸಮಿತಿ ಸಭೆಯಿಂದ ಹೊರ ನಡೆದ ಲಾವಾಸ