ಇವಿಎಂ ಮಷಿನ್ ಗಳ ಕಾರ್ಯಕ್ಷಮತೆ ಬಗ್ಗೆ ವಿವಾದ ಎದ್ದಿರುವ ಬೆನ್ನಲ್ಲಿ, ಸಾಧ್ಯವಾದರೆ ಇದನ್ನು ಹ್ಯಾಕ್ ಮಾಡಿ ತೋರಿಸಿ ಎಂದು ಚುನಾವಣಾ ಆಯೋಗ ಓಪನ್ ಚಾಲೆಂಜ್ ಹಾಕಿದೆ.
ನವದೆಹಲಿ (ಏ.12): ಇವಿಎಂ ಮಷಿನ್ ಗಳ ಕಾರ್ಯಕ್ಷಮತೆ ಬಗ್ಗೆ ವಿವಾದ ಎದ್ದಿರುವ ಬೆನ್ನಲ್ಲಿ, ಸಾಧ್ಯವಾದರೆ ಇದನ್ನು ಹ್ಯಾಕ್ ಮಾಡಿ ತೋರಿಸಿ ಎಂದು ಚುನಾವಣಾ ಆಯೋಗ ಓಪನ್ ಚಾಲೆಂಜ್ ಹಾಕಿದೆ.
ಇವಿಎಂ ಮಷಿನ್ ಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನ ಎದ್ದಿದ್ದು, ಬ್ಯಾಲೆಟ್ ಪೇಪರ್ ಗೆ ಹಿಂತಿರುಗಬೇಕು ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಸಂದರ್ಭದಲ್ಲಿ ಮೇ ಮೊದಲ ವಾರ ನುರಿತರು, ವಿಜ್ಞಾನಿಗಳು, ತಂತ್ರಜ್ಞರು ಒಂದು ವಾರ ಅಥವಾ 10 ದಿನಗಳ ಕಾಲ ಇವಿಎಂ ಮಷಿನ್ ನನ್ನು ಹ್ಯಾಕ್ ಮಾಡಲು ಸಾಧ್ಯವಾ ಎಂದು ಪರೀಕ್ಷಿಸುವರು ಎಂದು ಆಯೋಗ ತಿಳಿಸಿದೆ.
ಒಂದು ವಾರ ಅಥವಾ 10 ದಿನಗಳ ಕಾಲ ಬೇರೆ ಬೇರೆ ಹಂತಗಳಲ್ಲಿ ಹ್ಯಾಕ್ ಪರೀಕ್ಷೆ ನಡೆಯುವುದು. ಈ ದಿನಗಳಲ್ಲಿ ಯಾರು ಬೇಕಾದರೂ ಬಂದು ಪ್ರಯತ್ನಿಸಬಹುದು ಎಂದು ಚುನಾವಣಾ ಆಯೋಗ ಓಪನ್ ಚಾಲೆಂಜ್ ಹಾಕಿದೆ.
2009 ರಲ್ಲೂ ಕೂಡಾ ಇದೇ ರೀತಿ ಚಾಲೆಂಜ್ ಹಾಕಲಾಗಿತ್ತು. ಆದರೆ ಯಾರೊಬ್ಬರಿಗೂ ಹ್ಯಾಕ್ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದೆ.
