ಇವಿಎಂ ಯಂತ್ರಗಳ ಬಗ್ಗೆ ಅಪಸ್ವರ ಎತ್ತಿದ್ದ ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗ ಜೂ.03 ರಂದು ಇವಿಎಂನ್ನು ಹ್ಯಾಕ್ ಮಾಡಿ ತೋರಿಸಲು ಎಲ್ಲಾ ಪಕ್ಷಗಳಿಗೂ ಓಪನ್ ಚಾಲೆಂಜ್ ಹಾಕಿದೆ. ಐಟಿ ಪರಿಣಿತರನ್ನು ಕರೆದುಕೊಂಡು ಬಂದು ಪರೀಕ್ಷಿಸಿ ಎಂದು ಸವಾಲೆಸೆದಿದೆ.

ನವದೆಹಲಿಮ(ಮೇ.20): ಇವಿಎಂ ಯಂತ್ರಗಳ ಬಗ್ಗೆ ಅಪಸ್ವರ ಎತ್ತಿದ್ದ ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗ ಜೂ.03 ರಂದು ಇವಿಎಂನ್ನು ಹ್ಯಾಕ್ ಮಾಡಿ ತೋರಿಸಲು ಎಲ್ಲಾ ಪಕ್ಷಗಳಿಗೂ ಓಪನ್ ಚಾಲೆಂಜ್ ಹಾಕಿದೆ. ಐಟಿ ಪರಿಣಿತರನ್ನು ಕರೆದುಕೊಂಡು ಬಂದು ಪರೀಕ್ಷಿಸಿ ಎಂದು ಸವಾಲೆಸೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಚರಾಜ್ಯ ಚುನಾವಣಾ ಸಂದರ್ಭದಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಳಸಿದ ಇವಿಎಂಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಹ್ಯಾಕ್ ಮಾಡಿ ತೋರಿಸಲಿ. ಯಾವ ಪಕ್ಷ ಚಾಲೆಂಜಲ್ಲಿ ಭಾಗವಹಿಸಲು ಸಿದ್ಧವಿದೆಯೋ ಮೇ.26 ರ ಸಂಜೆ 5 ಗಂಟೆಯೊಳಗೆ ಚುನಾವಣಾ ಆಯೋಗಕ್ಕೆ ಅಧಿಕೃತಗೊಳಿಸಬೇಕು.ಅವರಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತಿಯೊಂದು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪಕ್ಷಗಳು ಮೂವರು ಅಧಿಕರತ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಬಹುದು ಎಂದು ಮುಖ್ಯ ಚುನಾವಣಾಧಿಕಾರಿ ನಾಸಿಂ ಜೈದಿ ಹೇಳಿದ್ದಾರೆ.

ಇವಿಎಂನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಪ್ರತಿಪಕ್ಷಗಳು ತಮ್ಮ ಆರೋಪಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸಲಿಲ್ಲ. ಇವಿಎಂನ ಒಮ್ಮೆ ಪ್ರೋಗ್ರಾಂ ಮಾಡಿದರೆ ಅದರೊಳಗೆ ತ್ರೋಜನ್ ಹಾರ್ಸ್ ಚಿಪ್ಪನ್ನು ಸೇರಿಸಲು ಸಾಧ್ಯವಿಲ್ಲ. ಹಾಗೂ ವಿಎಂಗಳು ವೈ-ಫೈ ಚಿಪ್ ಗಳನ್ನು ಹೊಂದಿಲ್ಲವೆಂದು ನಾಸಿಂ ಜೈದಿ ಹೇಳಿದ್ದಾರೆ.