ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಚುನಾವಣಾ ಜಾಹೀರಾತಿನಲ್ಲಿ ‘ಪಪ್ಪು’ ಎಂಬ ಪದ ಬಳಕೆ ಮಾಡುವುದಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ.
ಅಹಮದಾಬಾದ್: ಗುಜರಾತ್ನಲ್ಲಿ ಆಡಳಿತಾರೂಢ ಬಿಜೆಪಿ ಚುನಾವಣಾ ಜಾಹೀರಾತಿನಲ್ಲಿ ‘ಪಪ್ಪು’ ಎಂಬ ಪದ ಬಳಕೆ ಮಾಡುವುದಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ.
‘ಪಪ್ಪು’ ಎಂಬ ಶಬ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಬಳಕೆ ಮಾಡಲಾಗುತ್ತಿದೆ. ಈ ಶಬ್ದವನ್ನು ಬಳಸುವುದು ಅವಹೇಳನಕಾರಿ ಎಂದು ಆಯೋಗ ಹೇಳಿದೆ.
ರಾಹುಲ್ ಗಾಂಧಿ ಅಣಕಿಸಲು ಸಾಮಾಜಿಕ ಜಾಲತಾಣಗಳಲ್ಲಿ ಪಪ್ಪು ಎಂಬ ಶಬ್ದವನ್ನು ಹುಟ್ಟುಹಾಕಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿ ಈ ಶಬ್ದವನ್ನು ಬಳಕೆ ಮಾಡಿಲ್ಲ ಎಂದು ತಿಳಿಸಿದೆ.
