400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ 2 ಹಂತದಲ್ಲಿ ನಡೆದರೆ, ಉಳಿದ ಮೂರು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.
ನವದೆಹಲಿ(ಜ. 04): ಉತ್ತರಪ್ರದೇಶ, ಪಂಜಾಬ್, ಮಣಿಪುರ, ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳು ಘೋಷಣೆಗೊಂಡಿವೆ. ಈ ಪಂಚ ರಾಜ್ಯಗಳಲ್ಲಿ ಫೆಬ್ರವರಿ 4ರಿಂದ ಮಾರ್ಚ್ 8ರವರೆಗೆ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮಾರ್ಚ್ 11ರಂದು ಎಲ್ಲಾ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ನಿರೀಕ್ಷೆಯಂತೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಣಿಪುರದಲ್ಲಿ 2 ಹಂತದಲ್ಲಿ ನಡೆದರೆ, ಉಳಿದ ಮೂರು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.
ಉತ್ತರ ಪ್ರದೇಶ - ಒಟ್ಟು ಸ್ಥಾನಗಳು 403
* ಏಳು ಹಂತದ ಚುನಾವಣೆ
ಫೆ. 11, 15, 19, 23, 27, ಮಾ. 4 ಮತ್ತು 8ರಂದು ಮತದಾನ
ಉತ್ತರಾಖಂಡ - ಒಟ್ಟು ಸ್ಥಾನಗಳು 70
ಚುನಾವಣಾ ದಿನಾಂಕ: ಫೆ. 15
ಗೋವಾ - ಒಟ್ಟು ಸ್ಥಾನಗಳು 40
ಚುನಾವಣಾ ದಿನಾಂಕ: ಫೆ. 4
ಮಣಿಪುರ - ಒಟ್ಟು ಸ್ಥಾನಗಳು 40
ಚುನಾವಣಾ ದಿನಾಂಕ: ಮಾ. 4 ಮತ್ತು 8
ಪಂಜಾಬ್ - ಒಟ್ಟು ಸ್ಥಾನಗಳು 117
ಚುನಾವಣಾ ದಿನಾಂಕ: ಫೆ. 4