ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ನಾಗಮಂಗಲದಲ್ಲಿ ಕುಮಾರ ಪರ್ವ ಕಾರ್ಯಕ್ರಮಕ್ಕೆ ಬಳಸಿದ್ದ ಜೆಸಿಬಿ ಹಾಗೂ ಕ್ರೇನ್’ನ್ನು ವಶಕ್ಕೆ ಪಡೆಯಲಾಗಿದೆ. 11 ಜೆಸಿಬಿ ಹಾಗೂ 1 ಕ್ರೇನ್’ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಗಮಂಗಲ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ನಾಗಮಂಗಲದಲ್ಲಿ ಕುಮಾರ ಪರ್ವ ಕಾರ್ಯಕ್ರಮಕ್ಕೆ ಬಳಸಿದ್ದ ಜೆಸಿಬಿ ಹಾಗೂ ಕ್ರೇನ್’ನ್ನು ವಶಕ್ಕೆ ಪಡೆಯಲಾಗಿದೆ. 11 ಜೆಸಿಬಿ ಹಾಗೂ 1 ಕ್ರೇನ್’ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾ.30ರಂದು ನಾಗಮಂಗಲದಲ್ಲಿ ಕುಮಾರ ಪರ್ವ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸ್ವಾಗತಿಸಿಲು ಜೆಸಿಬಿಗಳಲ್ಲಿ ಕುಳಿತು ಕಾರ್ಯಕರ್ತರು ಆಗಮಿಸಿದ್ದರು.
ಕ್ರೇನ್ ಬಳಸಿ ಕುಮಾರಸ್ವಾಮಿಗೆ ಬೃಹತ್ ಸೇಬಿನ ಹಾರವನ್ನು ಹಾಕಿದ್ದರು. ಅನುಮತಿ ಪಡೆಯದೇ ಕ್ರೇನ್ ಹಾಗೂ ಜೆಸಿಬಿ ಬಳಸಿದ ಜೆಡಿಎಸ್ ಮುಖಂಡರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ATM ಅಂದರೆ "Any Time Money" ಅಲ್ಲ, ಇದು ಅಟೆಂಪ್ಟ್ ಟು ಮರ್ಡರ್
video
ಸಿಎಂ ಆದರೆ ಶಿವಣ್ಣ ಏನ್ ಮಾಡ್ತಾರೆ?
entertainment/news