ಕರ್ನಾಟಕ ಚುನಾವಣಾ ರಾಯಭಾರಿಯಾಗಿ ರಾಹುಲ್​ ದ್ರಾವಿಡ್​​  ಇರುವ ಪೋಸ್ಟರನ್ನು  ಮುಖ್ಯ ಚುನಾವಣಾಧಿಕಾರಿ ಇಂದು ಬಿಡುಗಡೆ ಮಾಡಿದ್ದಾರೆ. 

ಬೆಂಗಳೂರು (ಮಾ. 28): ಕರ್ನಾಟಕ ಚುನಾವಣಾ ರಾಯಭಾರಿಯಾಗಿ ರಾಹುಲ್​ ದ್ರಾವಿಡ್​​ ಇರುವ ಪೋಸ್ಟರನ್ನು ಮುಖ್ಯ ಚುನಾವಣಾಧಿಕಾರಿ ಇಂದು ಬಿಡುಗಡೆ ಮಾಡಿದ್ದಾರೆ. 

ಮತದಾನ ಕುರಿತು ಅರಿವು ಮೂಡಿಸುವ ಮತ್ತು ವಿಚಾರಗಳನ್ನು ತುಂಬಿರುವ ಪೋಸ್ಟರ್’ಗಳನ್ನು ಬಿಡುಗಡೆ ಮಾಡಲಾಗಿದೆ. ರಾಹುಲ್ ದ್ರಾವಿಡ್ ಮತದಾನದ ಬಗ್ಗೆ ಮಾತನಾಡಿರುವ ವಿಡಿಯೋಗಳನ್ನು ರಾಜ್ಯಾದ್ಯಂತ ಪ್ರಚಾರ ಮಾಡಲಾಗುವುದು. ಥಿಯೇಟರ್, ಮಲ್ಟಿಪ್ಲೆಕ್ಸ್, ಟಿವಿಗಳಲ್ಲಿ ಪ್ರಚಾರ ಮಾಡಲಾಗುವುದು. 60 ಸೆಕೆಂಡ್ ವಿಡಿಯೋ ಇದೆ. ಚುನಾವಣಾ ಆ್ಯಂಥಮನ್ನು ಯೋಗರಾಜ್ ಭಟ್ ಬರೆಯುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ವಿಜಯ್ ಪ್ರಕಾಶ್ ಹಾಡಲಿದ್ದಾರೆ. 

ಇಂಗ್ಲೀಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿ ಇರುತ್ತದೆ. ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇವೆ. ಎರಡನೇ ಶನಿವಾರ ಎಲ್ಲರೂ ಬಂದು ಚುನಾವಣೆಯಲ್ಲಿ ಮತದಾನ ಮಾಡಬೇಕು. ಕೋಡ್ ಆಪ್ ಕಂಡಕ್ಟ್ ಬಂದ ತಕ್ಷಣ ಎಲ್ಲಾ ಫೋಟೋ ಗ್ರಾಪ್ಸ್ ಹಾಗೂ ಪೋಸ್ಟರ್ ಗಳನ್ನು ತೆಗೆಯಲಾಗಿದೆ. ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. 

ಮತದಾನದ ಬಗ್ಗೆ ರಾಹುಲ್ ದ್ರಾವಿಡ್ ಹೀಗೆ ಹೇಳುತ್ತಾರೆ.