ಮಹಿಳೆಯರಿಂದ ಚಪ್ಪಲಿ ಸೇವೆ: ಏಕೆ ಗೊತ್ತೆ ?
ಬೀದರ್(ಆ.08): ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯವನ್ನು ಸ್ವತಕ್ಕೆ ಬಳಸಿಕೊಂಡ ಜನಪ್ರತಿನಿಧಿಗಳಿಗೆ ಮಹಿಳೆಯರು ತಕ್ಕ ಶಾಸ್ತಿ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಪುಲಾಸಿಂಗ್ ತಾಂಡಾದಲ್ಲಿ ನಡೆದಿದೆ.
ಒಂದು ಕಡೆ ಜನರಿಗೆ ಕುಡಿಯಲು ನೀರು ಸಿಗದೆ ಜನ ಪರದಾಡುತ್ತಿದ್ದರೆ, ಸರ್ಕಾರಿ ಬಾವಿ ನೀರು ತಮ್ಮ ಸ್ವಂತದ ಜಮೀನಿಗೆ ಬಳಸಿಕೊಳ್ಳುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯರಿಬ್ಬರ ವಿರುದ್ಧ ಪ್ರತಿಭಟಿಸುವ ಮೂಲಕ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಪ್ರತಿಭಟನೆಯನ್ನು ನಿಯಂತ್ರಿಸಲು ಇಬ್ಬರು ಗ್ರಾ.ಪಂ ಸದಸ್ಯರಿಬ್ಬರಿಗೂ ತಾಂಡಾದ ಮಹಿಳೆಯರು ಹಿಗ್ಗಾ, ಮುಗ್ಗಾ ಚಪ್ಪಲಿಯಿಂದ ಧರ್ಮದೇಟು ನೀಡಿ ತಮ್ಮ ಆಕ್ರೋಶ ಹೊರಹಾಕಿದರು.
ಗ್ರಾ.ಪಂ ಸದಸ್ಯರಿಗೆ ಥಳಿಸಿರುವ ಘಟನೆ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಪುಲಾಸಿಂಗ್ ತಾಂಡಾದಲ್ಲಿ ನಡೆದಿದೆ,ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದೆ ಬಂದ ಸರ್ಕಾರಿ ಬಾವಿ ನೀರು ಕದಿಯುತ್ತಿದ್ದ ಗ್ರಾ.ಪಂ ಸದಸ್ಯರಿಬ್ಬರಿಗೂ ತಾಂಡಾದ ಮಹಿಳೆಯರು ಹಿಗ್ಗಾ, ಮುಗ್ಗಾ ಚಪ್ಪಲಿಯಿಂದ ಧರ್ಮದೇಟು ನೀಡಿ ತಮ್ಮ ಆಕ್ರೋಶ ಹೊರಹಾಕಿದರು.
