Asianet Suvarna News Asianet Suvarna News

ಪದ್ಮನಾಭ ದೇವಸ್ಥಾನದಲ್ಲಿ 8 ವಜ್ರಗಳು ನಾಪತ್ತೆ

ಇಲ್ಲಿನ ಖ್ಯಾತ ಪದ್ಮನಾಭ ದೇವಸ್ಥಾನದ ವಿಗ್ರಹದಿಂದ 8 ವಜ್ರಗಳು ಕಾಣೆಯಾಗಿರುವ ಆಘಾತಕಾರಿ ವಿಚಾರವನ್ನು ಅಮಿಲಸ್ ಕ್ಯುರಿ ಸುಪ್ರೀಂಕೋರ್ಟ್’ನಲ್ಲಿ ಪ್ರಸ್ತಾಪಿಸಿದ್ದಾರೆ.

Eight diamonds missing from Padmanabhaswamy temple

ತಿರುವನಂತಪುರಂ (ಜು.03): ಇಲ್ಲಿನ ಖ್ಯಾತ ಪದ್ಮನಾಭ ದೇವಸ್ಥಾನದ ವಿಗ್ರಹದಿಂದ 8 ವಜ್ರಗಳು ಕಾಣೆಯಾಗಿರುವ ಆಘಾತಕಾರಿ ವಿಚಾರವನ್ನು ಅಮಿಲಸ್ ಕ್ಯುರಿ ಸುಪ್ರೀಂಕೋರ್ಟ್’ನಲ್ಲಿ ಪ್ರಸ್ತಾಪಿಸಿದ್ದಾರೆ.

ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ತರಲು ಸುಪ್ರೀಂಕೋರ್ಟ್ ಅಮಿಕಸ್ ಕ್ಯುರಿಯಾಗಿ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂರವರನ್ನು ನೇಮಿಸಿತ್ತು. ವಿಗ್ರಹದ ತಿಲಕ ಭಾಗದಲ್ಲಿರುವ 8 ವಜ್ರಗಳು ಕಾಣೆಯಾಗಿವೆ. ಕ್ರೈಮ್ ಬ್ರಾಂಚ್’ನವರು ತನಿಖೆ ನಡೆಸುತ್ತಿದ್ದಾರೆ ಎಂದು ಗೋಪಾಲ್ ಸುಬ್ರಮಣಿಯಂ ಹೇಳಿದ್ದಾರೆ. ಅವುಗಳ ಅಂದಾಜು ಮೌಲ್ಯ ರೂ. 21 ಲಕ್ಷದಷ್ಟಿದ್ದು, ಪ್ರಾಚೀನವಾದ್ದರಿಂದ ಇನ್ನೂ  ಹೆಚ್ಚು ಬೆಲೆಬಾಳುತ್ತದೆ ಎಂದು ಸುಬ್ರಮಣಿಯಂ ಹೇಳಿದ್ದಾರೆ.

ಗರ್ಭಗುಡಿಯಲ್ಲಿರುವ ನೆಲಮಾಳಿಗೆಯಲ್ಲಿ  ವಜ್ರಗಳನ್ನು ಇಡಲಾಗಿತ್ತು. ಪ್ರತಿದಿನ  ಪೂಜಾ ಸಂದರ್ಭದಲ್ಲಿ ಹೊರ ತೆಗೆಯಲಾಗುತ್ತದೆ. ಈ ಸಂದರ್ಭದಲ್ಲೇ ಕಳೆದು ಹೋಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

Follow Us:
Download App:
  • android
  • ios