ಪ್ಯಾರಿಸ್(ಮೇ.16): ವಿಶ್ವದ ಅದ್ಭುತಗಳಲ್ಲೊಂದಾದ ಪ್ಯಾರಿಸ್‌ನ ಐಫಲ್ ಟವರ್‌ಗೆ ಇದೀಗ ಬರೋಬ್ಬರಿ 130 ವರ್ಷ. ಶತಮಾನಗಳಿಂದ ವಿಶ್ವದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ  ಮಾನವ ನಿರ್ಮಿತ ಅದ್ಭುತ ರಚನೆ, ಇಂದಿಗೂ ತನ್ನ ಘನತೆಯನ್ನು ಉಳಿಸಿಕೊಂಡಿದೆ.

ಇನ್ನು ಐಫಲ್ ಟವರ್ 130ನೇ ವರ್ಷಾಚರಣೆ ಹಿನ್ನೆಲೆಯಲ್ಲಿ, ಇಡೀ ಟವರ್‌ನ್ನು ಲೇಸರ್ ಕಿರಣಗಳಿಂದ ಅಲಂಕಾರಗೊಳಿಸಲಾಗಿತ್ತು. ರಾತ್ರಿಯ ಹೊತ್ತು ಇಡೀ ಟವರ್ ಬಣ್ಣ ಬಣ್ಣದ ಲೇಸರ್ ಕಿರಣಗಳಿಂದ ಕಂಗೊಳಿಸುತ್ತಿತ್ತು.

1889ರಲ್ಲಿ ನಿರ್ಮಾಣಗೊಂಡ ಐಫಲ್ ಟವರ್ 324 ಮೀಟರ್ ಎತ್ತರವಿದ್ದು, ಬರೋಬ್ಬರಿ 7,300 ಟನ್ ತೂಕವಿದೆ. ಐಫಲ್ ಟವರ್‌ಗೆ ವರ್ಷವೊಂದಕ್ಕೆ ಸುಮಾರು 7 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.