`ಆಕೆಯ ವೈದ್ಯಕೀಯ ವರದಿಗಳು ಮತ್ತು ಫೋಟೋಗ್ರಾಫ್ಸ್ ಈಗಾಗಲೇ ನನ್ನ ಕೈಸೇರಿವೆ. ಆಕೆ 500 ಕೆ.ಜಿ ತೂಕವಿದ್ದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆಕೆಯ ದೇಹದ ಻ಂಗಾಂಗಗಳು ಕೇವಲ ಶೇ.5ರಷ್ಟು ಮಾತ್ರ ಕಾರ್ಯಕ್ಷಮತೆ ಹೊಂದಿವೆ. ಈ ಕೇಸಿನಲ್ಲಿ ನಾನು ತುಂಬಾ ಜಾಗರೂಕನಾಗಿರಬೇಕು ಎಂದು ವೈದ್ಯ ಲಕ್ಡಾವಾಲಾ ತಿಳಿಸಿದ್ದಾರೆ.

ಮುಂಬೈ(ಡಿ.09): ವಿಶ್ವದ ಅತ್ಯಂತ ತೂಕದ ಮಹಿಳೆ ಎಂದೇ ಕರೆಯಲಾಗುವ ಈಜಿಫ್ಟಿನ ಮಹಿಳೆ 500 ಕೆಜಿ ತೂಕದ ಎಮನ್ ಅಹಮ್ಮದ್ ಮುಂಬೈನಲ್ಲಿ ತೂಕ ಇಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ಧಾರೆ. ಖ್ಯಾತ ವೈದ್ಯ ಮುಫಾಜಲ್ ಲಕ್ಡಾವಾಲಾ ಬಳಿ ಈ ಮಹಿಳೆ ಚಿಕಿತ್ಸೆ ಪಡೆಯಲಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಧ್ಯಪ್ರವೆಶದ ಬಳಿಕ ಎಮನ್ ಆಗಮನಕ್ಕಿದ್ದ ಲ್ಲ ರಾಜತಾಂತ್ರಿಕ ತೊಡಕುಗಳು ನಿವಾರಣೆಯಾಗಿದ್ದು, ಮುಂದಿನ 2 ವಾರಗಳಲ್ಲಿ ಮುಂಬೈಗೆ ಚಿಕಿತ್ಸೆಗೆ ಬರುವ ಸಾಧ್ಯತೆ ಇದೆ.