ಇಂಗ್ಲಂಡ್’ನ ಎಕ್ಸೆಟರ್’ನಲ್ಲಿರುವ ಇಸ್ಕಾ ಅಕಾಡೆಮಿಯ ಆಡಳಿತ ಮಂಡಳಿಗೆ ನಿನ್ನೆ ಶಾಲೆ ಆರಂಭವಾದಗ ಅಘಾತ ಕಾದಿತ್ತು. ಹೈಸ್ಕೂಲಿನ ಹುಡುಗ ವಿದ್ಯಾರ್ಥಿಗಳು ಪ್ಯಾಂಟ್ ಧರಿಸುವ ಬದಲು ಸ್ಕರ್ಟ್’ಗಳನ್ನು ಧರಿಸಿ ಬಂದಿದ್ದಾರೆ.
ಇಂಗ್ಲಂಡ್’ನ ಎಕ್ಸೆಟರ್’ನಲ್ಲಿರುವ ಇಸ್ಕಾ ಅಕಾಡೆಮಿಯ ಆಡಳಿತ ಮಂಡಳಿಗೆ ನಿನ್ನೆ ಶಾಲೆ ಆರಂಭವಾದಗ ಅಘಾತ ಕಾದಿತ್ತು. ಹೈಸ್ಕೂಲಿನ ಹುಡುಗ ವಿದ್ಯಾರ್ಥಿಗಳು ಪ್ಯಾಂಟ್ ಧರಿಸುವ ಬದಲು ಸ್ಕರ್ಟ್’ಗಳನ್ನು ಧರಿಸಿ ಬಂದಿದ್ದಾರೆ.
ಹುಡುಗರು ಈ ರೀತಿ ಸಮವಸ್ತ್ರ ಧರಿಸಲು ಕಾರಣ ಯಾವುದೇ ಹೊಸ ಫ್ಯಾಶನ್ ಅಲ್ಲ, ಬದಲಾಗಿ ಶಾಲೆಯ ‘ನೋ ಶಾರ್ಟ್ಸ್’ ನಿಯಮ. ಶಾಲಾ ಸಮವಸ್ತ್ರ ನಿಯಮದ ಪ್ರಕಾರ ಬಾಲಕರು ಕಡ್ಡಾಯವಾಗಿ ಪ್ಯಾಂಟ್’ಗಳನ್ನೇ ಧರಿಸಬೆಕು, ಚಡ್ಡಿಗಳಿಗೆ ಅವಕಾಶವಿಲ್ಲ. ಬಾಲಕಿಯರು ಸ್ಕರ್ಟ್ಸ್ ಧರಿಸಬಹುದಾಗಿದೆ.
ಆದರೆ ಈಗ ಅಲ್ಲಿ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ವಿದ್ಯಾರ್ಥಿಗಳಿಗೆ ಸೆಖೆಯನ್ನು ತಡೆಯಲಾಗುತ್ತಿಲ್ಲ. ಆದುದರಿಂದ ಶಾರ್ಟ್ಸ್ ಹಾಕಿಕೊಂಡು ಬರಲು ಅನುಮತಿ ಕೋರಿದ್ದಾರೆ. ಶಾಲೆಯ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ. ಬಾಲಕಿಯರು ಸ್ಕರ್ಟ್ ಧರಿಸಬಹುದಾದರೆ, ನಾವೇಕೆ ಶಾರ್ಟ್ಸ್ ಧರಿಸುವಂತಿಲ್ಲ ಎಂಬ ಯೋಚನೆಯೊಂದಿಗೆ ಹುಡುಗರು ಪ್ರತಿಭಟನೆಯ ಯೋಜನೆ ಹಾಕಿಕೊಂಡಿದ್ದಾರೆ. ಶಾಲೆಗೆ ಸ್ಕರ್ಟ್'ಗಳನ್ನು ಹಾಕಿಕೊಂಡು ಬಂದಿದ್ದಾರೆ. ಕೆಲವರು ಅಕ್ಕತಂಗಿಯರ ಲಂಗಗಳನ್ನು ಧರಿಸಿದ್ದರೆ, ಇನ್ನು ಕೆಲವರು ಗರ್ಲ್’ಫ್ರೆಂಡ್ಸ್’ಗಳಿಂದ ಕೇಳಿ ಪಡೆದಿದ್ದರಂತೆ!