ನಿನ್ನೆಯಷ್ಟೇ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಭರಿಸುವುದಾಗಿ ಕೋಲ್ಕತಾ ನೈಟ್'ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ತಿಳಿಸಿದ್ದರು.

ಕೋಲ್ಕತಾ(ಏ.28): ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣದ 4 ಪ್ರೇಕ್ಷಕರ ಗ್ಯಾಲರಿಗಳಿಗೆ ವೀರ ಯೋಧರ ಹೆಸರನ್ನು ಇಂದು ನಾಮಕರಣ ಮಾಡಲಾಗಿದೆ.

ಸುಕ್ಮಾ ದಾಳಿಯ ಸಂದರ್ಭದಲ್ಲಿ ದೇಶಕ್ಕಾಗಿ ಎದುರಾಳಿಗಳ ಗುಂಡಿಗೆ ಎದೆಯೊಡ್ಡಿದ ವೀರ ಸೇನಾನಿಗಳಾದ ಲೆಫ್ಟಿನೆಂಟ್ ಕರ್ನಲ್ ಧನ್ ಸಿಂಗ್ ಥಾಪಾ, ಕರ್ನಲ್ ಎನ್.ಜೆ. ನಾಯರ್, ಹವಾಲ್ದಾರ್ ಹ್ಯಾಂಗ್ಪಾನ್ ದಾದಾ, ಸುಬೇದಾರ್ ಜೋಗಿಂದರ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ.

ಯೋಧರ ಹೆಸರುಗಳನ್ನು ಇರಿಸಿರುವ ಪ್ರೇಕ್ಷಕರ ಗ್ಯಾಲರಿ ಇರುವ ಕ್ರೀಡಾಂಗಣದ ಈ ಭಾಗವೂ ರಕ್ಷಣ ಸಚಿವಾಲಯಕ್ಕೆ ಸೇರಿದ ಸ್ಥಳದಲ್ಲಿದೆ.

ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Scroll to load tweet…

ನಿನ್ನೆಯಷ್ಟೇ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಭರಿಸುವುದಾಗಿ ಕೋಲ್ಕತಾ ನೈಟ್'ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ತಿಳಿಸಿದ್ದರು.