ಬೆಂಗಳೂರು[ಸೆ. 12]  ಒಂದು ಕಡೆ ಡಿಕೆ ಶಿವಕುಮಾರ್ ಇಡಿ ವಶದಲ್ಲಿ ಇದ್ದರೆ ಇನ್ನೊಂದು ಕಡೆ ಇಡಿ ಅಧಿಕಾರಿಗಳು ಡಿಕೆಶಿ ಪುತ್ರಿ ಐಶ್ವರ್ಯಾ ಅವರನ್ನು ಗುರುವಾರ ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಿದರು.

23 ವರ್ಷದ ಐಶ್ವರ್ಯ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ಮತ್ತು ಕೋಟ್ಯಂತರ ರೂ. ವ್ಯವಹಾರ ನಡೆಸಿರುವುದಕ್ಕೆ ವಿವರಣೆ ಕೇಳಲು ಜಾರಿ ನಿರ್ದೇಶನಾಲಯ ಅವರಿಗೆ ಮೂರು ದಿನಗಳ ಹಿಂದೆ ಸಮನ್ಸ್​ ಜಾರಿ ಮಾಡಿತ್ತು.

18ನೇ ವಯಸ್ಸಲ್ಲೇ 1 ಕೋಟಿ ರೂ. ಅಪಾರ್ಟ್‌ಮೆಂಟ್ ಖರೀದಿಸಿದ ಡಿಕೆಶಿ ಮಗಳ ಫೋಟೋಸ್.

ಗುರುವಾರ ವಿಚಾರಣೆ ಮುಗಿಸಿರುವ ಐಶ್ವರ್ಯಾ ಅವರಿಗೆ ಶುಕ್ರವಾರವೂ ವಿಚಾರಣೆಗೆ ಬರುವಂತೆ ಇಡಿ ತಿಳಿಸಿ ಸಮನ್ಸ್ ನೀಡಿದೆ. ಶುಕ್ರವಾರ 11 ಗಂಟೆಯಿಂದ ಐಶ್ವರ್ಯಾ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

ಸತತ 9ನೇ ದಿನವೂ ಶಿವಕುಮಾರ್ ಅವರಿಗೂ  ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು.  ಬಿಪಿ ಹಾಗೂ ಹೈ ಶುಗರ್​ನಿಂದ ಬಳಲುತ್ತಿರುವ ಅವನ್ನು ಪ್ರತಿನಿತ್ಯ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ವಿಶೇಷ ನ್ಯಾಯಾಲಯ ಹೇಳಿತ್ತು. ಡಿಕೆ ಶಿವಕುಮಾರ್ ಅವರಿಗೆ 3-4ಗಂಟೆಗಳ ವಿಶ್ರಾಂತಿಗೂ ಸೂಚನೆ ನೀಡಲಾಗಿದೆ.