ಎಎಪಿ ಸರ್ಕಾರಕ್ಕೆ ಶಾಕ್: 20 ಶಾಸಕರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ

First Published 19, Jan 2018, 4:50 PM IST
ECI recommends disqualification of 20 AAP MLAs say sources
Highlights

ವಕೀಲ ಪ್ರಶಾಂತ್ ಪಟೇಲ್ ಅವರು ಶಾಸಕರನ್ನು ಅನರ್ಹಗೊಳಿಸಬೇಕೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದ್ದರು.

ನವದೆಹಲಿ(ಜ.19): ನೂತನ ವರ್ಷದ ಆರಂಭದಲ್ಲಿಯೇ ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಸರ್ಕಾರಕ್ಕೆ ಚುನಾವಣಾ ಆಯೋಗ ಬಹುದೊಡ್ಡ ಶಾಕ್ ನೀಡಿದೆ.

ಲಾಭದಾಯಕ ಹುದ್ದೆ ಹೊಂದಿರುವ 20 ಶಾಸಕರನ್ನು ಅನರ್ಹಗೊಳಿಸಿದ್ದು, ಆದೇಶವನ್ನು ಅನುಮೋದಿಸಲು  ರಾಷ್ಟ್ರಪತಿ ರಾಮ್'ನಾಥ್ ಕೋವಿಂದ್ ಅವರಿಗೆ ಶಿಫಾರಸ್ಸು ಮಾಡಿದೆ. ಶಿಫಾರಸ್ಸಿನ ಅನ್ವಯದಂತೆ ಶಾಸಕರು ಅನರ್ಹರಾದರೆ ಆಯಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.

ಪ್ರಸ್ತುತ ದೆಹಲಿ ವಿದಾನಸಭೆಯ 70 ಸದಸ್ಯಬಲದಲ್ಲಿ 65 ಎಎಪಿ ಸದಸ್ಯರಿದ್ದಾರೆ.  2015ರ ಮಾರ್ಚ್'ನಲ್ಲಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 21 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.

ವಕೀಲ ಪ್ರಶಾಂತ್ ಪಟೇಲ್ ಅವರು ಶಾಸಕರನ್ನು ಅನರ್ಹಗೊಳಿಸಬೇಕೆಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದ್ದರು. ಚುನಾವಣಾ ಆಯೋಗ ಶಾಸಕರಿಗೆ ನೋಟಿಸ್ ನೀಡಿದ್ದರೂ ಅವರ್ಯಾರು ಸರಿಯಾಗಿ ಸ್ಪಂದಿಸಿರಲಿಲ್ಲ. ಆಯೋಗದ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಎಪಿ ಇದು ಬಿಜೆಪಿ ಸರ್ಕಾರದ ಅಜೆಂಡಾ ಎಂದು ಟೀಕಿಸಿದೆ.

20 ಶಾಸಕರು ಅನರ್ಹಗೊಂಡರೂ ಸರ್ಕಾರಕ್ಕೆ ತೊಂದರೆಯಾಗುವುದಿಲ್ಲ. ಸರ್ಕಾರ ರಚನೆಗೆ 36 ಸದಸ್ಯಬಲ ಸಾಕು. ಈ ಶಾಸಕರೆಲ್ಲ ಅನರ್ಹಗೊಂಡರೆ ಇನ್ನು 45 ಶಾಸಕರು ಉಳಿದುಕೊಂಡಿರುತ್ತಾರೆ.

 

loader