ವಿವಿ ಪ್ಯಾಟ್ ನಿಂದ ಮತದಾರನ ಮಾಹಿತಿ ರಾಜಕಾರಣಿಗೆ ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 11:56 AM IST
EC to clear VVPAT doubts
Highlights

ವಿವಿ ಪ್ಯಾಟ್ ಬಗೆಗೆ ರಾಜಕಾರಣಿಗಳು ಮುಗ್ದ ಮತದಾರರನ್ನು ನಂಬಿಸಿ ಹಣ ಪಡೆದುಕೊಂಡ ನೀವು ಮತ ಹಾಕಿದಿದ್ದಲ್ಲಿ ಮಾಹಿತಿ ತಿಳಿಯಲಿದೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದು, ಇದೀಗ ಈ ಸಂಬಂಧ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಹೀಗೆ ಮಾಹಿತಿ ಸೋರಿಕೆಯಾಗಲು ಸಾಧ್ಯವಿಲ್ಲ. ಈ ಬಗ್ಗೆ ಆಂದೋಲನವನ್ನು ಮಾಡಲಾಗುವುದು ಎಂದಿದೆ. 

ನವದೆಹಲಿ: ಚುನಾವಣೆ ವೇಳೆ ಅಪಾರ ಹಣ ಚೆಲ್ಲುವ ರಾಜಕಾರಣಿಗಳು, ದುಡ್ಡು ಪಡೆದವರು ತಮಗೇ ಮತ ಹಾಕಲಿ ಎಂಬ ಉದ್ದೇಶದಿಂದ ಹೊಸ ಪುಕಾರು ಹಬ್ಬಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ‘ನೀವು ನಮ್ಮಿಂದ ಹಣ ಪಡೆದಿದ್ದೀರಿ. ಒಂದು ವೇಳೆ ನಮಗೆ ಮತ ಹಾಕದೇ ಹೋದರೆ ನಮಗೆ ಗೊತ್ತಾಗಲಿದೆ. ಮತಯಂತ್ರದ ಪಕ್ಕದಲ್ಲಿರುವ ವಿವಿಪ್ಯಾಟ್ ಯಂತ್ರ ನೀವು ಮತ ಹಾಕುತ್ತಿರುವ ಫೋಟೋ ತೆಗೆದು ಕಳುಹಿಸಲಿದೆ’ ಎಂದು ಮುಗ್ಧ ಮತದಾರರಿಗೆ ಹೆದರಿಸುತ್ತಿದ್ದಾರೆ. ಸ್ವತಃ ಚುನಾವಣಾ ಆಯೋಗವೇ ಈ ವಿಷಯ ತಿಳಿಸಿದೆ. ಅಲ್ಲದೆ ಇದೊಂದು ಸುಳ್ಳು ಸುದ್ದಿ ಆಗಿದೆ. ಮತ ಖರೀದಿಸಲು ಹಣ ಬಳಸುವ ಕೆಲವರು ವ್ಯಕ್ತಿಗಳು ಇದನ್ನು ಹಬ್ಬಿಸುತ್ತಿದ್ದಾರೆ. 

ಮತದಾರರಲ್ಲಿ ಇಂತಹ ತಪ್ಪು ಕಲ್ಪನೆ ಹೋಗಲಾಡಿಸಲು ಆಂದೋಲನ ಆರಂಭಿಸುತ್ತೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು ತಿಳಿಸಿದ್ದಾರೆ. ‘ಮತ ಹಾಕುವಾಗ ನಿಮ್ಮ ಫೋಟೋವನ್ನು ವಿವಿಪ್ಯಾಟ್ ಸೆರೆಹಿಡಿಯುತ್ತದೆ ಎಂದು ಮತದಾರರಿಗೆ ಹಣ ಹಂಚುವ ಕಾಯಕದಲ್ಲಿ ತೊಡಗಿರುವವರು ಹೇಳುತ್ತಿದ್ದಾರೆ. ಇವಿಎಂನಲ್ಲಿ ಯಾವ ಗುಂಡಿ ಒತ್ತಿದ್ದೀರಿ ಎಂಬುದು ತಮಗೆ ಗೊತ್ತಾಗುತ್ತದೆ ಎಂದು ಆ ವ್ಯಕ್ತಿಗಳು ಮತದಾರರನ್ನು ನಂಬಿಸುತ್ತಿದ್ದಾರೆ. 

ಜತೆಗೆ ಹಣ ಕೊಟ್ಟಿದ್ದಕ್ಕೆ ಪ್ರತಿಯಾಗಿ ತಮಗೆ ಮತ ಹಾಕಿ. ಇಲ್ಲದೇ ಹೋದರೆ ಹಣ ಪಡೆಯಲೇಬೇಡಿ. ಮತ ಯಾರಿಗೆ ಹಾಕಿದ್ದೀರಿ ಎಂಬುದು ಯಂತ್ರದಿಂದ ಗೊತ್ತಾಗುತ್ತದೆ ಎಂದೆಲ್ಲಾ ಹೇಳುತ್ತಿದ್ದಾರೆ. ವಿವಿಪ್ಯಾಟ್ ಯಂತ್ರಗಳು ಮತದಾರರ ಗೋಪ್ಯತೆಯನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಈ ಬಗ್ಗೆ ಜಾಗೃತಿ ಆಂದೋಲನ ನಡೆಸಲಾಗುತ್ತದೆ. 

ವಿವಿಪ್ಯಾಟ್ ಯಂತ್ರಗಳ ಬಗ್ಗೆ ಯಾರು ಏನೇ ಹೇಳಿದರೂ ನಂಬಬೇಡಿ. ಆ ಯಂತ್ರ ಫೋಟೋ ಸೆರೆಹಿಡಿಯುವುದಿಲ್ಲ ಎಂದು ಮನವರಿಕೆ ಮಾಡಿಕೊಡುತ್ತೇವೆ’ ಎಂದು ಅವರು ಹೇಳಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳ ಕುರಿತು ಆಶಂಕೆ ಮೂಡಿದ ಹಿನ್ನೆಲೆಯಲ್ಲಿ ವಿವಿಪ್ಯಾಟ್ (ವೋಟರ್  ವೆರಿಫೈಯಬಲ್ ಆಡಿಟ್ ಟ್ರಯಲ್) ಎಂಬ ಹೊಸ ವ್ಯವಸ್ಥೆಯನ್ನು ಚುನಾವಣಾ ಆಯೋಗ ಬಳಸುತ್ತಿದೆ. 

ಮತ ಚಲಾವಣೆ ಮಾಡಿದ ಬಳಿಕ ಮತ್ತೊಂದು ಯಂತ್ರದಲ್ಲಿ ಸಣ್ಣ ಚೀಟಿಯೊಂದು ಗೋಚರವಾಗು ತ್ತದೆ. ಅದರಲ್ಲಿ ಮತದಾರರು ಯಾವ ಅಭ್ಯರ್ಥಿ ಪರ ಹಕ್ಕು ಚಲಾವಣೆ ಮಾಡಿದ್ದಾರೆ ಎಂಬ ವಿವರವಿರುತ್ತದೆ. 7 ಸೆಕೆಂಡ್‌ಗಳ ದರ್ಶನದ ಬಳಿಕ ಆ ಚೀಟಿ ಪೆಟ್ಟಿಗೆ ಯೊಳಕ್ಕೆ ಬೀಳುತ್ತದೆ. ಅದನ್ನು ಒಯ್ಯಲು ಮತದಾ ರರಿಗೆ ಅವಕಾಶವಿರುವುದಿಲ್ಲ. ಚುನಾವಣೆ ಮತ ಎಣಿಕೆ ವೇಳೆ ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಜತೆಗೆ ವಿವಿಪ್ಯಾಟ್ ಚೀಟಿಗಳನ್ನೂ ಎಣಿಸಿ ತಾಳೆ ಹಾಕಲಾಗುತ್ತದೆ.

loader