ಚುನಾವಣಾ ಆಯೋಗವು ನೀತಿ ಸಂಹಿತೆ ಪೂರ್ಣಗೊಳ್ಳುವ ಡಿ.18ರವರೆಗೂ ಏಕೆ ಸಂದರ್ಶನ ನೀಡಿದ್ದು ಎಂದು ರಾಹುಲ್ ಗಾಂಧಿಯವರಿಗೂ ವಿವರಣೆ ಕೇಳಿ ನೋಟಿಸ್ ನೀಡಿದೆ.
ನವದೆಹಲಿ(ಡಿ.13): ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ರಾಹುಲ್ ಗಾಂಧಿ ಅವರ ಸಂದರ್ಶನ ಪ್ರಸಾರ ಮಾಡಿದ್ದ ಚಾನಲ್'ಗಳ ವಿರುದ್ಧ ಎಫ್'ಐಆರ್ ದಾಖಲಿಸಬೇಕೆಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.
ಗುಜರಾತ್'ನಲ್ಲಿ 2ನೇ ಹಂತದ ವಿಧಾನಸಭಾ ಚುನಾವಣೆ ಮುಗಿಯಲು 48 ಗಂಟೆ ಬಾಕಿಯಿರುವಾಗಲೇ ಚುನಾವಣಾ ಜಿಲ್ಲೆಗಳಲ್ಲಿ ಏಐಸಿಸಿ ಉಪಾಧ್ಯಕ್ಷ ರಾಗುಲ್ ಗಾಂಧಿಯವರ ಸಂದರ್ಶನ ಪ್ರಸಾರ ಮಾಡಿದ್ದ ಚಾನಲ್'ಗಳ ವಿರುದ್ಧ 1951ನೇ ನಾಗರಿಕ ಪ್ರಾತಿನಿದ್ಯ ಕಾಯಿದೆಯ ಉಲ್ಲಂಘನೆಯಡಿ ಎಫ್'ಐಆರ್ ದಾಖಲಿಸಲಾಗಿದೆ.
ಚುನಾವಣಾ ಆಯೋಗವು ನೀತಿ ಸಂಹಿತೆ ಪೂರ್ಣಗೊಳ್ಳುವ ಡಿ.18ರವರೆಗೂ ಏಕೆ ಸಂದರ್ಶನ ನೀಡಿದ್ದು ಎಂದು ರಾಹುಲ್ ಗಾಂಧಿಯವರಿಗೂ ವಿವರಣೆ ಕೇಳಿ ನೋಟಿಸ್ ನೀಡಿದೆ. 2ನೇ ಹಂತದ ಚುನಾವಣೆ ಪೂರ್ಣಗೊಳ್ಳುವ ಮುನ್ನವೇ ಸಂದರ್ಶನ ಪ್ರಸಾರ ಮಾಡಿದರೆ ಚುನಾವಣಾ ಮಾಹಿತಿಯನ್ನು ತೋರ್ಪಡಿಸಿದಂತಾಗುತ್ತದೆ'ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿ ಕೂಡ ಚುನಾವಣೆ ಮುಗಿಯುವ 48 ಗಂಟೆ ಮುನ್ನ ರಾಹುಲ್ ಗಾಂಧಿ ಸಂದರ್ಶನ ಪ್ರಸಾರ ಮಾಡಿದ್ದಕ್ಕಾಗಿ ಗುಜರಾತ್ ಚುನಾವಣಾ ಆಯೋಗಕ್ಕೆ 3 ದೂರುಗಳನ್ನು ನೀಡಿದೆ.
