ಬಿಜೆಪಿ ಸೇರಿದ ಮಾಜಿ ಶಾಸಕನಿಗೆ ಚುನಾವಣಾಧಿಕಾರಿಗಳಿಂದ ಶಾಕ್

First Published 11, Apr 2018, 3:48 PM IST
EC Staff Seize Candidate vehicles
Highlights

ಇದೇ ಸಂದರ್ಭದಲ್ಲಿ  ಚುನಾವಣಾಧಿಕಾರಗಳು 8 ವಾಹನಗಳು ಹಾಗೂ 10ಕ್ಕೂ ಅಧಿಕ ಬೈಕ್'ನ್ನು ವಶಪಡಿಸಿಕೊಂಡಿದ್ದಾರೆ

ಬೀದರ್(ಏ.11):  ಬಿಜೆಪಿ ಸೇರ್ಪಡೆ ಬಳಿಕ ಪ್ರಥ‌ಮ ಬಾರಿಗೆ ತವರು ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಮಲ್ಲಿಕಾರ್ಜುನ ಖೂಬಾಗೆ ಚುನಾವಣಾಧಿಕಾರಿಗಳಿಂದ ಶಾಕ್ ಉಂಟಾಗಿದೆ.

ಬಸವಕಲ್ಯಾಣ ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ  ಬಿಜೆಪಿ  ಸೇರ್ಪಡೆಯಾದ ಬಳಿಕ ಪ್ರಥಮ ಬಾರಿಗೆ ತವರು ಕ್ಷೇತ್ರ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಕೆ ಆಗಮಿಸಿದಾಗ ಭರ್ಜರಿ ಸ್ವಾಗತ ದೊರೆತಿದೆ. ಇದೇ ಸಂದರ್ಭದಲ್ಲಿ  ಚುನಾವಣಾಧಿಕಾರಗಳು 8 ವಾಹನಗಳು ಹಾಗೂ 10ಕ್ಕೂ ಅಧಿಕ ಬೈಕ್'ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 9ರ ಬಂಗಲಾ ಗೇಟ್'ನಿಂದ ಖೂಬಾ ಮನೆಯವರೆಗೆ ಖೂಬಾ ಅವರಿಗೆ ಸ್ವಾಗತ ಕೋರಲು ಬಂದ  ಅಭಿಮಾನಿಗಳಿಂದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಾಸಕರ ಮನೆಯಿಂದ ನಗರದಲ್ಲಿ ನಡೆಯಬೇಕಾದ ರಾಲಿ ಕೂಡ ರದ್ದಾಗಿದೆ. ನಾನು ಯಾವುದೇ ನೀತಿಸಂಹಿತೆ ಉಲಂಘಿಸಿಲ್ಲ. ಇದು ಅಭಿಮಾನಿಗಳು ಮಾಡಿದ್ದು ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖೂಬಾ ತಿಳಿಸಿದ್ದಾರೆ.

loader