ಇವಿಎಂಗಳು ವಿಶ್ವಸಾರ್ಹವಾಗಿವೆ ಹಾಗೂ ಅವುಗಳಲ್ಲಿ ಯಾವುದೇ ಹಸ್ತಕ್ಷೇಪಗಳಿಗೆ ಆಸ್ಪದವಿಲ್ಲವೆಂದು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಲಾಗುವುದೆಂದು ಹೇಳಲಾಗಿದೆ. 7 ರಾಷ್ಟ್ರೀಯ ಪಕ್ಷಗಳು ಹಾಗೂ 49 ರಾಜ್ಯಮಟ್ಟದ ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿದೆ.

ನವದೆಹಲಿ (ಮೇ. 05): ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಕುರಿತು 16 ರಾಜಕೀಯ ಪಕ್ಷಗಳು ಎತ್ತಿರುವ ವಿಷಯಗಳನ್ನು ಚರ್ಚಿಸಲು ಭಾರತೀಯ ಚುನಾವಣಾ ಆಯೋಗವು ಮೇ.12ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವಿಎಂಗಳು ವಿಶ್ವಸಾರ್ಹವಾಗಿವೆ ಹಾಗೂ ಅವುಗಳಲ್ಲಿ ಯಾವುದೇ ಹಸ್ತಕ್ಷೇಪಗಳಿಗೆ ಆಸ್ಪದವಿಲ್ಲವೆಂದು ರಾಜಕೀಯ ಪಕ್ಷಗಳಿಗೆ ಮನವರಿಕೆ ಮಾಡಲಾಗುವುದೆಂದು ಹೇಳಲಾಗಿದೆ.

7 ರಾಷ್ಟ್ರೀಯ ಪಕ್ಷಗಳು ಹಾಗೂ 49 ರಾಜ್ಯಮಟ್ಟದ ಪಕ್ಷಗಳನ್ನು ಸಭೆಗೆ ಆಹ್ವಾನಿಸಲಾಗಿದೆ.

ಜತೆಗೆ, ಮತಗಳ ಮರುಎಣಿಕೆ, ಮತದಾರರಿಗೆ ಲಂಚ ನೀಡುವ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಅನರ್ಹಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದೆಂದು ಹೇಳಲಾಗಿದೆ.