ಈ ಸವಾಲು ಅಧಿಕೃತ ರಾಜಕೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಒಳಗೊಂಡಿದ್ದು, ಪ್ರತಿ ಪಕ್ಷದಿಂದ ಭಾರತದ ರಾಷ್ಟ್ರೀಯತೆಯನ್ನು ಹೊಂದಿರುವ ಮೂವರು ಪ್ರತಿನಿಧಿಗಳು ಭಾಗವಹಿಸಲು ಅವಕಾಶವಿದೆ'
ನವದೆಹಲಿ(ಮೇ.20): ಇವಿಎಂ ಮಷಿನ್'ಗಳನ್ನು ಹ್ಯಾಕ್ ಮಾಡಿ ತೋರಿಸಿ ಎಂದು ಭಾರತೀಯ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಜೂನ್.3 ಕ್ಕೆ ಬಹಿರಂಗ ಸವಾಲು ನಿಗದಿಪಡಿಸಿದೆ.
ಈ ಸವಾಲು ಅಧಿಕೃತ ರಾಜಕೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಒಳಗೊಂಡಿದ್ದು, ಪ್ರತಿ ಪಕ್ಷದಿಂದ ಭಾರತದ ರಾಷ್ಟ್ರೀಯತೆಯನ್ನು ಹೊಂದಿರುವ ಮೂವರು ಪ್ರತಿನಿಧಿಗಳು ಭಾಗವಹಿಸಲು ಅವಕಾಶವಿದೆ' ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ತಿಳಿಸಿದ್ದಾರೆ.
"ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿರುವ ಜನರು ತಮ್ಮ ಸಮರ್ಥನೆಯನ್ನು ಬೆಂಬಲಿಸಲು ಯಾವುದೇ ಪುರಾವೆ ಅಥವಾ ವಿಶ್ವಾಸಾರ್ಹ ತಂತ್ರಜ್ಞಾನವನ್ನು ಇನ್ನೂ ಸಲ್ಲಿಸಿಲ್ಲ" ಈ ಕಾರಣದಿಂದಾಗಿ ಬಹಿರಂಗ ಸವಾಲಿಗೆ ದಿನ ನಿಗದಿ ಪಡಿಸಲಾಗಿದೆ'ಎಂದು ಜೈದಿ ಹೇಳಿದ್ದಾರೆ.
ಉತ್ತರ ಪ್ರದೇಶ ಹಾಗೂ ದೆಹಲಿ ವಿಧಾನ'ಸಭೆ ಚುನಾವಣೆಯಲ್ಲಿ ಇವಿಎಂ'ನಿಂದಾಗಿ ಅಕ್ರಮ ನಡೆದಿದೆ ಎಂದು ಬಿ'ಎಸ್ಪಿ, ಎಎಪಿ ಹಾಗೂ ಟಿಎಂಸಿ ಪಕ್ಷಗಳು ನೇರ ಆರೋಪ ಮಾಡಿದ್ದವು. ಅಲ್ಲದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹ್ಯಾಕ್ ಮಾಡಬಹುದೆಂದು ಪ್ರಾತ್ಯಕ್ಷಿಕೆಯನ್ನು ತೋರಿಸಿದ್ದರು. ಆದರೆ ಇದಕ್ಕೆ ಯಾವುದೇ ಅಧಿಕೃತ ಆಧಾರವಿಲ್ಲವೆಂದು ಚುನಾವಣಾ ಅಯೋಗ ಅಲ್ಲಗೆಳದಿತ್ತು.
ಭಾರತೀಯ ಇವಿಎಂ ತಂತ್ರಜ್ಞಾನವನ್ನು ಕೇಂದ್ರ ರಕ್ಷಣಾ ಇಲಾಖೆಯಡಿ ಕಾರ್ಯನಿರ್ವಹಿಸುವ ಸಾರ್ವಜಿನಿಕ ಉದ್ದಿಮೆಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)'ನ ಹಾಗೂ ಮತ್ತೊಂದು ಸಾರ್ವಜನಿಕ ಉದ್ದಿಮೆಯಾದ ಪರಮಾಣು ಶಕ್ತಿ ಇಲಾಖೆಯ ಆಯ್ದ ಇಂಜಿನಿಯರ್'ಗಳು ಅಭಿವೃದ್ಧಿ ಪಡಿಸಿದ್ದಾರೆ.
ಚುನಾವಣಾ ಆಯೋಗ ಇವಿಎಂ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ ನಂತರ ವಿವಿಧ ರೀತಿಯ ಪ್ರಾತ್ಯಕ್ಷಿಕೆಗಳನ್ನು ನಡೆಸಿದ ನಂತರ ಮಾನ್ಯ ಮಾಡಿತ್ತು.
