ಐರ್ಲೆಂಡ್ :  ಪಿಜ್ಜಾ ತಿನ್ನುವ ಸ್ಪರ್ಧೆಯನ್ನು ಕೇಳಿರುತ್ತೀರಿ. ಆದರೆ, ಈ ದೈತ್ಯ ಪಿಜ್ಜಾ ತಿಂದರೆ ಬರೋಬ್ಬರಿ  500 ಯೂರೋ (41 ಸಾವಿರ ರು.) ಗೆಲ್ಲಬಹುದು. 

ಐರ್ಲೆಂಡ್‌ನ ಪಿನ್ಹೆಡ್ಸ್ ಪಿಜ್ಜಾ ಕಂಪನಿ ಈ ಆಫರ್ ನೀಡಿದೆ. 32  ಇಂಚು ದೊಡ್ಡದಾದ ಪಿಜ್ಜಾ ಹಾಗೂ ಎರಡು ಮಿಲ್ಕ್ ಶೇಕ್‌ಗಳನ್ನು ಒಂದೇ ಬಾರಿಗೆ ತಿಂದರೆ ಈ ಹಣ ನಿಮ್ಮದು. 

ಆದರೆ, ಇದುವರೆಗೂ ಯಾರಿಂದಲೂ ಈ ಪಿಜ್ಜಾವನ್ನು ತಿನ್ನಲು ಸಾಧ್ಯವಾಗಿಲ್ಲ. ನೂರು ಮಂದಿ ಪಿಜ್ಜಾ ತಿನ್ನುವ ಸವಾಲು ಪಡೆದು ಸಾಕಪ್ಪಾ ಇದರ ಸಹವಾಸ ಎಂದು ಏದುಸಿರು ಬಿಟ್ಟಿದ್ದಾರೆ.