ಮೋದಿ ಪ್ರಮಾಣವಚನಕ್ಕೆ ಸಿಂಗಾರಗೊಂಡ ರಾಷ್ಟ್ರಪತಿ ಭವನ| ಮೋದಿ ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ 6,500 ವಿಶೇಷ ಅತಿಥಿಗಳು| ರಾಷ್ಟ್ರಪತಿ ಭವನದ ಮುಂಭಾಗದ ಆವರಣದಲ್ಲಿ ಸೇರಿದ ಅತಿಥಿಗಳು| ಸಂಪುಟ ರಚನೆಯಲ್ಲಿ ಬ್ಯುಸಿಯಾಗಿರುವ ಪ್ರಧಾನಿ ಮೋದಿ| ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ಭವನ ತಲುಪಲಿರುವ ಮೋದಿ|

ನವದೆಹಲಿ(ಮೇ.30): ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಅದ್ದೂರಿ ಸಮಾರಂಭಕ್ಕೆ ರಾಷ್ಟ್ರಪತಿ ಭವನ ಸಿಂಗಾರಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ ಪ್ರಮಾಣವಚನಕ್ಕೆ ಸುಮಾರು 6,500 ವಿಶೇಷ ಅತಿಥಿಗಳು ಭಾಗವಹಿಸಲಿದ್ದು, ರಾಷ್ಟ್ರಪತಿ ಭವನದ ಮುಂಭಾಗದ ಆವರಣದಲ್ಲಿ ಅತಿಥಿಗಳು ಬಂದು ಸೇರುತ್ತಿದ್ದಾರೆ.

Scroll to load tweet…

ಕೇಂದ್ರ ಸಚಿವ ಸಂಪುಟ ರಚನೆಯಲ್ಲಿ ಮಗ್ನರಾಗಿರುವ ಪ್ರಧಾನಿ ಮೋದಿ, ಇನ್ನು ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿ ಭವನ ತಲುಪಲಿದ್ದು, ಮೋದಿ ಜೊತೆ ಸುಮಾರು 45-50 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.