ನಿನ್ನೆ ಶ್ರೀರಾಮುಲು ಯಡವಟ್ಟು ಹೇಳಿಕೆ ನೀಡಿದ್ದರು

ಬಂಟ್ವಾಳ(ನ.11): ಬಿಜೆಪಿ ನಾಯಕರು ಯಾಕೋ ತಮ್ಮ ಪಕ್ಷದ ನಾಯಕರನ್ನೇ ನಿಂದಿಸುತ್ತಿದ್ದಾರೆ. ನಿನ್ನೆ ಶ್ರೀರಾಮುಲು ಯಡವಟ್ಟು ಮಾಡಿಕೊಂಡಿದ್ದರೆ ಇಂದು ಬಂಟ್ವಾಳದ ಪರಿವರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾಂಗ್ರೆಸ್ ನಾಯರನ್ನು ಟೀಕಿಸುವ ಬರದಲ್ಲಿ ತಮ್ಮ ಪಕ್ಷದ ಅದರಲ್ಲೂ ಪ್ರಧಾನಮಂತ್ರಿಗಳನ್ನೇ ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್ ನಾಯಕರ ಟೀಕಿಸುವ ಬರದಲ್ಲಿ ಯಡವಿದ ಡಿ.ವಿ ಸದಾನಂದಗೌಡ ಅವರು ಬಾಯಿ ತಪ್ಪಿ ನರೇಂದ್ರ ಮೋದಿಗೆ ನಾಚಿಕೆಯಾಗಬೇಕು ಎಂದ ಹೇಳಿದ್ದಾರೆ. ನಿನ್ನೆ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಶ್ರೀರಾಮುಲು ಕೂಡ ವೀರಾವೇಶದ ಭಾಷಣ ಮಾಡುತ್ತಾ, ‘ಮೊನ್ನೆ ಮೊನ್ನೆ ಶೋಭಾ ಕರಂದ್ಲಾಜೆ ಶೋಭಾ, ಬಿಎಸ್​ವೈ, ಡಿವಿಎಸ್ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವಂತ ಕೆಲಸ ಮಾಡಿದ್ದರು. ಇದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಭಾಷಣದ ವೇಳೆ ಸಂಸದ ಶ್ರೀರಾಮುಲು ಯಡವಟ್ಟು ಹೇಳಿಕೆ ನೀಡಿದ್ದರು.