ದುನಿಯಾ ವಿಜಿಗೆ ಸಿಗುತ್ತಾ ನಿರೀಕ್ಷಣಾ ಜಾಮೀನು..?

First Published 6, Jun 2018, 7:14 AM IST
Duniya Viji Anticipatory bail Plea Verdict On June 8
Highlights

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ನಟ ದುನಿಯಾ ವಿಜಯ್ ಹಾಗೂ ನಿರ್ಮಾಪಕ ಸುಂದರ್‌ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಈಗಾಗಲೇ ನಡೆದಿದ್ದು, ಈ ಬಗ್ಗೆ ಅಂತಿಮ ಆದೇಶ  ಜೂ.8 ರಂದು ಪ್ರಕಟವಾಗಲಿದೆ. 

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ನಟ ದುನಿಯಾ ವಿಜಯ್ ಹಾಗೂ ನಿರ್ಮಾಪಕ ಸುಂದರ್‌ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ 65ನೇ ಸೆಷನ್ಸ್ ನ್ಯಾಯಾಲಯ ಅಂತಿಮ ಆದೇಶವನ್ನು ಜೂ.8 ರಂದು ಪ್ರಕಟಿಸಲಿದೆ. 

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಎ. ಮಂಜುನಾಥ ಅರ್ಜಿಯ ಆದೇಶವನ್ನು ಜೂ.8ರಂದು ಪ್ರಕಟಿಸುವುದಾಗಿ ತಿಳಿಸಿದರು. ಅರ್ಜಿ ದಾರರು ಹಾಗೂ ಸರ್ಕಾರದ ಪರ ವಕೀಲರ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆದೇಶ ಕಾಯ್ದಿರಿಸಿದರು.

ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ಇಬ್ಬರು ಖಳನಟರು ಮೃತಪಟ್ಟ ಪ್ರಕರಣದಲ್ಲಿ ಸುಂದರ್ ಪಿ. ಗೌಡ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಪರಿಣಾಮ ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ನೀಡಿ ವಶಕ್ಕೆ ಪಡೆ ಯಲು ತಾವರೆಕೆರೆ ಪೊಲೀಸರು ಸುಂದರ್‌ಗೌಡರ ಮನೆಗೆ ಬಂದಿದ್ದಾಗ ದುನಿಯಾ ವಿಜಯ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು ಎಂದು ತಾವರೆಕೆರೆ ಠಾಣೆ ಹೆಡ್ ಕಾನ್‌ಸ್ಟೇಬಲ್ ಗೋವಿಂದರಾಜು ಸಲ್ಲಿಸಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿತ್ತು.

loader