ಬೆಂಗಳೂರು[ಸೆ.30]: ತನ್ನ ಎರಡನೇ ಹೆಂಡತಿ ಕೀರ್ತಿ ಗೌಡಳಿಗೆ ಮೊದಲ ಪತ್ನಿ ನಾಗರತ್ನಳಿಂದ ಜೀವ ಬೆದರಿಕೆಯಿದ್ದು ರಕ್ಷಣೆ ಒದಗಿಸುವಂತೆ ನಟ ದುನಿಯಾ ವಿಜಯ್ ಅವರು ಗಿರಿನಗರ ಪೊಲೀಸ್ ಠಾಣೆಗೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ಪತ್ರ ಬರೆದಿದ್ದಾರೆ.

ಸೆ.23 ರಂದು ನಾಗರತ್ನರವರು ಕೀರ್ತಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂದು ನನ್ನನ್ನು ಭೇಟಿ ಮಾಡಲು ಬರುವ ಸಮಯದಲ್ಲಿ ಕಾರಿನ ಚಾಲಕ ಮಹಮ್ಮದ್  ಅವರಿಗೆ ಕರೆ ಮಾಡಿ  ಕೀರ್ತಿಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮಕಿ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಕಾರಣದಿಂದ ಕೀರ್ತಿ ಅವರು ಸಹ ಮಾನಸಿಕವಾಗಿ ನೊಂದಿದ್ದು ಮತ್ತೇ ಇದೇ ರೀತಿಯ ಘಟನೆ ಜರುಗಿದರೆ ಆತ್ಮಹತ್ಯೆ  ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಒಂದು ವೇಳೆ  ಕೀರ್ತಿಯವರಿಗೆ ಏನಾದರೂ ತೊಂದರೆಯಾದಲ್ಲಿ ಅದಕ್ಕೆ ನಾಗರತ್ನರವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಕಾರಣದಿಂದ ಕೀರ್ತಿ ಗೌಡ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ

ಜಿಮ್ ತರಬೇತುದಾರ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಳೆದ ಒಂದು ವಾರದಿಂದ ದುನಿಯಾ ವಿಜಯ್ ಹಾಗೂ ಮೂವರು ಸಹಚರರು ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದು ಅ.1ರಂದು ಮತ್ತೇ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.