ಮೈಸೂರು (ಅ.20): ಶಿಕ್ಷೆ ಮುಗಿಸಿದರೂ ಜೈಲಿನಲ್ಲಿದ್ದ ಮಹಿಳಾ ಖೈದಿಯನ್ನು 22 ಸಾವಿರ ಹಣ ಕಟ್ಟಿ ಬಿಡುಗಡೆಯಾಗುವಂತೆ ಮಾಡಿ ನಟ ದುನಿಯಾ ವಿಜಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಲಕ್ಷ್ಮಮ್ಮ ದುನಿಯಾ ವಿಜಿ ಕಟ್ಟಿದ ಹಣದಿಂದಾಗಿ ಬಿಡುಗಡೆಯಾದ ಖೈದಿ.

ಹಾಸನ ಜಿಲ್ಲೆ ಸಕಲೇಶಪುರದವರಾದ ಲಕ್ಷ್ಮಮ್ಮ ಗಲಾಟೆ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಒಳಗಾಗಿ ಮೈಸೂರು ಜೈಲು ಸೇರಿದ್ದರು.

ಹಾಸನ ಜಿಲ್ಲಾ ನ್ಯಾಯಾಲಯ ಇವರಿಗೆ ಶಿಕ್ಷೆ ಹಾಗೂ 22 ಸಾವಿರ ದಂಡ ವಿಧಿಸಿತ್ತು. ಲಕ್ಷ್ಮಮ್ಮ ಶಿಕ್ಷೆ ಅನುಭವಿಸಿದ್ದರೂ ದಂಡ ಕಟ್ಟಲು ಹಣವಿಲ್ಲದೆ ಜೈಲಿನಲ್ಲೇ ಉಳಿದುಕೊಂಡಿದ್ದರು.

ವಿಷಯ ತಿಳಿದ ನಟ ದುನಿಯಾ ವಿಜಿ ಮೈಸೂರು ಜೈಲಿಗೆ ಆಗಮಿಸಿ ಈಕೆ ಪರವಾಗಿ ಹಣ ಕಟ್ಟಿ ಲಕ್ಷ್ಮಮ್ಮ ಅವರನ್ನು ಬಿಡುಗಡೆಯಾಗುವಂತೆ ಮಾಡಿದ್ದಾರೆ.