ಜೈಲು ಸೇರಿರುವ ನಟ ದುನಿಯಾ ವಿಜಯ್‌ ಅವರ ಜಾಮೀನು ಅರ್ಜಿಯ ತೀರ್ಪು ಬುಧವಾರ ಹೊರಬೀಳಲಿದ್ದು, ವಿಜಯ್‌ಗೆ ಜೈಲೋ, ಬೇಲೋ ಎಂಬುದು ನಿರ್ಧಾರವಾಗಲಿದೆ. 

ಬೆಂಗಳೂರು : ಜಿಮ್‌ ತರಬೇತುದಾರನ ಅಪಹರಣ ಮತ್ತು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್‌ ಅವರ ಜಾಮೀನು ಅರ್ಜಿಯ ತೀರ್ಪು ಬುಧವಾರ ಹೊರಬೀಳಲಿದ್ದು, ವಿಜಯ್‌ಗೆ ಜೈಲೋ, ಬೇಲೋ ಎಂಬುದು ನಿರ್ಧಾರವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ್‌ ಬಾಬು ಅವರು ಜಾಮೀನು ಅರ್ಜಿಯ ಅಂತಿಮ ಆದೇಶ ಕಾಯ್ದಿರಿಸಿದ್ದು, ಬುಧವಾರ ಪ್ರಕಟಿಸಲಿದ್ದಾರೆ.

ಸೆ.22 ರಂದು ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿದ್ದ ದೇಹದಾಢ್ರ್ಯ ಸ್ಪರ್ಧೆಗೆ ತೆರಳಿದ್ದ ದುನಿಯಾ ವಿಜಯ್‌ ಹಾಗೂ ಅವರ ಸಹಚರರು ಕ್ಷುಲ್ಲಕ ಕಾರಣಕ್ಕೆ ಜಿಮ್‌ ತರಬೇತುದಾರ ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಅಪಹರಣ ಮಾಡಿದ್ದರು. ಪ್ರಕರಣ ಸಂಬಂಧ ವಿಜಯ್‌ ಹಾಗೂ ಸಹಚರರಾದ ಪ್ರಸಾದ್‌, ಕಾರು ಚಾಲಕ ಪ್ರಸಾದ್‌ ಕುಮಾರ್‌ ಹಾಗೂ ಮಣಿ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದುನಿಯಾ ವಿಯಜ್‌ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿಯ ಅಂತಿಮ ಆದೇಶ ಬುಧವಾರ ಪ್ರಕಟವಾಗಲಿದೆ.