ನೀರಿನಲ್ಲಿ ಚಲಿಸುತ್ತೆ, ರಸ್ತೆಯ ಮೇಲೂ ಓಡುತ್ತೆ | ಗೋವಾದಲ್ಲಿ ಪ್ರವಾಸಿಗರ ಗಮನ ಸೆಳೆಯುತ್ತಿದೆ ಡಕ್ ಬೋಟ್ | ದೇಶದಲ್ಲೇ ಪ್ರಥಮ ಪ್ರಯತ್ನಕ್ಕೆ ಟೂರಿಸ್ಟ್ ಫುಲ್ ಖುಷ್
ಭೂಮಿ ಮತ್ತು ನೀರು ಎರಡರ ಮೇಲೂ ಓಡಾಡಬಲ್ಲ ವಾಹನ ಇದ್ದರೇ ಹೇಗೆ ಇರುತ್ತೇ ಅಲ್ವಾ , ಹೌದು , ದೇಶದಲ್ಲಿಯೇ ಇಂತಹ ಒಂದು ಬೋಟ್ ಇರೋದು ಗೋವಾದಲ್ಲಿ.
ಈ ಬೋಟ್ ನೀರು ಹಾಗೂ ರಸ್ತೆಯ ಮೇಲೆ ಸರಾಗವಾಗಿ ಚಲಿಸುತ್ತದೆ. ಪ್ರವಾಸಿ ತಾಣವಾಗಿರುವ ಗೋವಾಕ್ಕೆ ಆಗಮಿಸುವ ಹೆಚ್ಚಿನ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
ಗೋವಾಕ್ಕೆ ಬಂದ ಪ್ರವಾಸಿಗರು ಈ ಡಕ್ ಬೋಟ್ನಲ್ಲಿ ಓಡಾಡದೆಯೇ ಹೋಗುವುದಿಲ್ಲ. ದೇಶದಲ್ಲಿನ ಇತರ ಕೆಲ ರಾಜ್ಯಗಳು ಈ ಡಕ್ ಬೋಟ್ ಓಡಾಟ ಆರಂಭಿಸಲು ಪ್ರಯತ್ನ ನಡೆಸಿದ್ದರೂ ಇದುವರೆಗೂ ಅದು ಸಾಧ್ಯವಾಗಿಲ್ಲಾ. ಇದರಿಂದಾಗಿ ಗೋವಾದ ಪ್ರವಾಸಿಗರಿಗೆ ಡಕ್ ಬೋಟ್ ಒಂದು ಪ್ರಮುಖ ಆಕರ್ಷಣೆಯಾಗಿದೆ
.


