ಯುಎಇನಲ್ಲಿ ಕಳೆದ 20 ವರ್ಷಗಳಿಂದ ಚಹಾ ಮಾರಿ ಜೀವನ ಸಾಗಿಸುತ್ತಿದ್ದ 50 ವರ್ಷದ ಭಾರತೀಯ ವ್ಯಾಪಾರಿಯನ್ನು ಇಲ್ಲಿನ ಎಲೆಕ್ಟ್ರಾನಿಕ್ ಶಾಪ್ ಒಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿದ ಘಟನೆ ಬೆಳಕಿಗೆ ಬಂದಿದೆ.

ದುಬೈ(ನ.28): ಯುಎಇನಲ್ಲಿ ಕಳೆದ 20 ವರ್ಷಗಳಿಂದ ಚಹಾ ಮಾರಿ ಜೀವನ ಸಾಗಿಸುತ್ತಿದ್ದ 50 ವರ್ಷದ ಭಾರತೀಯ ವ್ಯಾಪಾರಿಯನ್ನು ಇಲ್ಲಿನ ಎಲೆಕ್ಟ್ರಾನಿಕ್ ಶಾಪ್ ಒಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿದ ಘಟನೆ ಬೆಳಕಿಗೆ ಬಂದಿದೆ.

 ಎಲೆಕ್ಟ್ರಾನಿಕ್ ಶಾಪ್'ನ ಹೊಸ ಶಾಖೆಯ ಉದ್ಘಾಟನೆ ಮಾಡಲು ಕೇರಳ ಮೂಲದ ಮೊಹಮ್ಮದ್ ಶಫಿಯನ್ನು ಆಹ್ವಾನಿಸಲಾಗಿದ್ದಾರೆ. ಈತ ಕಳೆದ 20 ವರ್ಷಗಳಿಂದ ಚಹಾ ಮಾರಾಟ ಮಾಡಿ ತನ್ನ ಜೀವನ ಸಾಗಿಸುತ್ತಿದ್ದ.

ಉದ್ಘಾಟನಾ ಕಾರ್ಯಕ್ರಮ ನಡೆದ ಬಳಿಕ 'ಕೀ ಫ್ಯಾಷನ್ ಎಲೆಕ್ಟ್ರಾನಿಕ್ಸ್ ಟ್ರೆಂಡಿಂಗ್'ನ ಅಧ್ಯಕ್ಷ ನಿಲೀಶ್ ಭಾಟಿಯಾ ಈ ವಿಶೇಷ ಅತಿಥಿಗೆ ಶಾಲು ಹಾಕಿ ಸನ್ಮಾನಿಸಿದ್ದಾರಂತೆ.