ದುಬೈ(ಅ.15): ವಿದೇಶಗಳಿಗೆ ತೆರಳುವವರನ್ನು ಏರ್‌'ಪೋರ್ಟ್‌ಗಳಲ್ಲಿ ಭದ್ರತಾ ಸಿಬ್ಬಂದಿ ಹಲವು ತಪಾಸಣೆಗಳನ್ನು ಮಾಡುತ್ತಾರೆ. ಆದರೆ ದುಬೈನಲ್ಲಿ ಮುಂದಿನ ವರ್ಷದಿಂದ ಆ ಸಮಸ್ಯೆ ಇರುವುದಿಲ್ಲ. 2018ರಿಂದ ಅಲ್ಲಿ ಭದ್ರತಾ ತಪಾಸಣೆಯನ್ನು ಮಾನವರು ಮಾಡುವುದಿಲ್ಲ. ಬದಲಾಗಿ ಮೀನುಗಳು ಮಾಡುತ್ತವೆ.

ಹೊಸ ಯೋಜನೆ ಅನ್ವಯ, ಒಂದು ಅಕ್ವೇರಿಯಂ ಸುರಂಗ ಇರುತ್ತದೆ. ಅದರೊಳಗೆ ಹೋಗಲು ವಿಮಾನ ನಿಲ್ದಾಣದಲ್ಲಿನ 3ಡಿ ಫೇಸ್ ಸ್ಕ್ಯಾನಿಕ್ ಕಿಯೋಸ್ಕ್‌'ಗಳಲ್ಲಿ ನೋಂದಣಿ ಮಾಡಿಕೊಂಡು ಪಾಸ್ ತೆಗೆದುಕೊಳ್ಳಬೇಕು.

ಅಕ್ವೇರಿಯಂ ಸುರಂಗದೊಳಗೆ ಹೆಜ್ಜೆ ಇಡುತ್ತಿದ್ದಂತೆ ಸುಂದರವಾದ ಮೀನುಗಳು ಕಾಣುತ್ತವೆ. ಅವನ್ನು ನೋಡುತ್ತಾ ಮುಂದೆ ಸಾಗುತ್ತಿದ್ದರೆ, ನೀರಿನೊಳಗೇ ಇರುವ 80 ಕ್ಯಾಮೆರಾಗಳು ಪ್ರಯಾಣಿಕರ ಮುಖದ ವಿವಿಧ ಭಂಗಿಗಳನ್ನು ಸೆರೆ ಹಿಡಿಯುತ್ತವೆ. ಪ್ರಯಾಣಿಕರು ಸುರಂಗದಿಂದ ಹೊರಗೆ ಬರುವಷ್ಟರಲ್ಲಿ ಅವರ ಬಯೋಮೆಟ್ರಿಕ್ ಅಂಶ ಹೊಂದಾಣಿಕೆ ಮಾಡಿ ನೋಡಿ ನೋಡಲಾಗುತ್ತದೆ. ಎಲ್ಲವೂ ಸರಿ ಇದ್ದರೆ, ‘ನೈಸ್ ಟ್ರಿಪ್’ ಎಂಬ ಸಂದೇಶ ಮೊಬೈಲ್ ಬರುತ್ತದೆ. ಇಲ್ಲವಾದಲ್ಲಿ ಭದ್ರತಾ ಸಿಬ್ಬಂದಿ ಎದುರಾಗುತ್ತಾರೆ.