ಮೈಸೂರಿನ ಆಲನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜಯಲಕ್ಷ್ಮೀಪುರಂನ ವಿದ್ಯಾಶ್ರಮದಲ್ಲಿ ಬಿಎಸ್ಸಿ ಓದುತ್ತರುವ ಸಾಗರ್ ಮತ್ತು ಬನ್ನೂರು ರಸ್ತೆಯ ವಿದ್ಯಾವಿಕಾಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಸೃಜನ್ ಸಾರ್ವಜನಿಕರಿಂದ ಬಂಧನಕ್ಕೊಳಗಾದ ವಿದ್ಯಾರ್ಥಿಗಳು. ಇಬ್ಬರು ರಾತ್ರಿ ವೇಳೆ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಮೈಮೇಲೆ ಪ್ರಜ್ಞೆ ಇರದಂತೆ ವರ್ತಿಸುತ್ತಿದ್ದ ಇಬ್ಬರೂ ಸಾರ್ವಜನಿಕರಿಗೆ ಕೀಟಲೆ ಮಾಡುತ್ತಿದ್ದರು. ಇಬ್ಬರ ಹುಚ್ಚಾಟವನ್ನು ನೋಡಿ ಸಹಿಸದೆ ಸಾರ್ವಜನಿಕರೇ ಇವರನ್ನು ಸ್ಥಳದಲ್ಲಿದ್ದ ಬೋನಿನಲ್ಲಿ ಕೂಡಿಟ್ಟಿದ್ದಾರೆ. ನಂತರ ಸ್ಥಳಕ್ಕೆ ಬಂದ ನಜರ್ ಬಾದ್ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮೈಸೂರು(ನ.18): ಕುಡಿದು ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಸಾರ್ವಜನಿಕರು ಬೋನಿನಲ್ಲಿ ಕೂಡಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಆಲನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜಯಲಕ್ಷ್ಮೀಪುರಂನ ವಿದ್ಯಾಶ್ರಮದಲ್ಲಿ ಬಿಎಸ್ಸಿ ಓದುತ್ತರುವ ಸಾಗರ್ ಮತ್ತು ಬನ್ನೂರು ರಸ್ತೆಯ ವಿದ್ಯಾವಿಕಾಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಸೃಜನ್ ಸಾರ್ವಜನಿಕರಿಂದ ಬಂಧನಕ್ಕೊಳಗಾದ ವಿದ್ಯಾರ್ಥಿಗಳು. ಇಬ್ಬರು ರಾತ್ರಿ ವೇಳೆ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಮೈಮೇಲೆ ಪ್ರಜ್ಞೆ ಇರದಂತೆ ವರ್ತಿಸುತ್ತಿದ್ದ ಇಬ್ಬರೂ ಸಾರ್ವಜನಿಕರಿಗೆ ಕೀಟಲೆ ಮಾಡುತ್ತಿದ್ದರು.
ಇಬ್ಬರ ಹುಚ್ಚಾಟವನ್ನು ನೋಡಿ ಸಹಿಸದೆ ಸಾರ್ವಜನಿಕರೇ ಇವರನ್ನು ಸ್ಥಳದಲ್ಲಿದ್ದ ಬೋನಿನಲ್ಲಿ ಕೂಡಿಟ್ಟಿದ್ದಾರೆ. ನಂತರ ಸ್ಥಳಕ್ಕೆ ಬಂದ ನಜರ್ ಬಾದ್ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ.
