ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕುಮಾರಸ್ವಾಮಿ ಕುಡಿ ಮತ್ತಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಬೇಜಾವಬ್ದಾರಿ ತೋರುತ್ತಿರುವ ಆರೋಪ ಎದುರಾಗಿದೆ.
ಚಿಕ್ಕಬಳ್ಳಾಪುರ (ಅ.13): ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು, ಕೆಲಸ ಮಾಡದೇ, ನಿದ್ರೆ ಮಾಡುವ ರೈಲ್ವೆ ಸ್ಟೇಷನ್ ಮಾಸ್ಟರ್ ವಿರುದ್ದ ಸ್ಥಳೀಯರು ಬೇಸತ್ತಿದ್ದಾರೆ.
ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕುಮಾರಸ್ವಾಮಿ ಕುಡಿ ಮತ್ತಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಬೇಜಾವಬ್ದಾರಿ ತೋರುತ್ತಿರುವ ಆರೋಪ ಎದುರಾಗಿದೆ.
ಪ್ರತಿನಿತ್ಯ ಬೆಳ್ಳಂಬೆಳ್ಳಗ್ಗೆಯೇ ಕುಡಿದು ಪ್ರಯಾಣಿಕರಿಗೆ ಟಿಕೆಟ್ ನೀಡದೇ ಫುಲ್ ಟೈಟ್ ಆಗಿ ಮಲಗಿರುತ್ತಾನೆ. ಜತೆಗೆ ಕಚೇರಿಯಲ್ಲೇ ಸಿಗರೇಟು ಪ್ಯಾಕ್ ಕೂಡ ಪಕ್ಕದಲ್ಲೇ ಇಟ್ಟುಕೊಳ್ಳುತ್ತಾನೆ.
ಬೇಸತ್ತ ಪ್ರಯಾಣಿಕರು ಕೂಡಲೇ ಸ್ಟೇಷನ್ ಮಾಸ್ಟರ್ ಬದಲಾವಣೆಗೆ ಆಗ್ರಹಿಸಿದ್ದಾರೆ.