ಹೈದ್ರಾಬಾದ್ [ಜು.30] : ಎಣ್ಣೆ ಏಟು ಮನುಷ್ಯನನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯುತ್ತದೆ. ಅಲ್ಲೊಬ್ಬ ಕುಡಿದು ಹಾವನ್ನೇ ಕಚ್ಚಿ ತುಂಡು ಮಾಡಿದ್ದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿಯನ್ನು ತಬ್ಬಿ ಮುತ್ತು ನೀಡಿದ್ದಾನೆ. 

ಹೈದ್ರಾಬಾದ್ನಲ್ಲಿ ಹಬ್ಬದ ಆಚರಣೆ ವೇಳೆ ಗುಂಪಿನಲ್ಲಿ ನೃತ್ಯ ಮಾಡುತ್ತಿದ್ದಾಗ ಕುಡಿದ ಮತ್ತಿನಲ್ಲಿ ಯುವಕನೋರ್ವ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯನ್ನು ತಬ್ಬಿ ಮುತ್ತು ನೀಡಿದ್ದಾನೆ. 

ಈ ಸಂದರ್ಭದಲ್ಲಿ ಆತನನ್ನು ತಳ್ಳಿದ ಪೊಲೀಸ್ ಅಧಿಕಾರಿ ಕೆನ್ನೆಗೆ ಭಾರಿಸಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿದ್ದು, ಆತ ಖಾಸಗಿ ಬ್ಯಾಂಕೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾತ ಎನ್ನುವಷ್ಟು ಮಾಹಿತಿ ತಿಳಿದು ಬಂದಿದೆ.

ಎಣ್ಣೆ ಏಟು, ತನಗೆ ಕಚ್ಚಿದ ಹಾವನ್ನೇ ಕಚ್ಚಿ ಕಚ್ಚಿ ತುಂಡರಿಸಿದ, ಮುಂದೆ!

ಈತನ ವಿರುದ್ಧ ದೂರು IPC ಸೆಕ್ಷನ್ 353 ಅಡಿ [ಸಾರ್ವಜನಿಕ ಸೇವೆಯಲ್ಲಿರುವವರ ಮೇಲೆ ಹಲ್ಲೆ] ಪ್ರಕರಣ ದಾಖಲಾಗಿದ್ದು, ಕುಡಿದ ಮತ್ತಿನಲ್ಲಿ  ಈ ರೀತಿಯಾಗಿ ವರ್ತಿಸಿದ್ದು, ಹಿಂದೆ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.