ನವದೆಹಲಿ[ಜು. 29] ಈ ಪುಣ್ಯಾತ್ಮನಿಗೆ ಮದ್ಯದ ಅಮಲು, ನಿಶೆ ತಲೆಗೆ ಏರಿಹೋಗಿತ್ತು, ಅಮಲಿನಲ್ಲಿ ಇದ್ದವ ತನಗೆ ಕಚ್ಚಿದ ಹಾವನ್ನೇ ಕಚ್ಚಿ ಕಚ್ಚಿ ತುಂಡರಿಸಿದ್ದಾನೆ.

ಹಾವಿಗೆ ಕಚ್ಚಿದ ಉತ್ತರ ಪ್ರದೇಶಸದ ಎತಾಹ್ ದ ಅಸ್ರೌಲಿ ಗ್ರಾಮದ ರಾಜಕುಮಾರ್ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಈ ಘಟನೆ ಕುರಿತಾಗಿ ಈಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಆ ವ್ಯಕ್ತಿಯ ತಂದೆ ಬಾಬು ರಾಮ್ 'ನನ್ನ ಮಗ ಕುಡಿದಿದ್ದನು. ಹಾವು ನಮ್ಮ ಮನೆಗೆ ಪ್ರವೇಶಿಸಿ ಅವನನ್ನು ಕಚ್ಚಿತು.  ಅಮಲಿನಲ್ಲಿದ್ದ ಆತ ಹಾವನ್ನೇ ಕಚ್ಚಿ-ಕಚ್ಚಿ ತುಂಡು ಮಾಡಿದ.

ಕಿಚನ್‌ನಲ್ಲಿ ಕಾಳಿಂಗ ಸರ್ಪ! ವಿಡಿಯೋನೇ ನೋಡಕ್ಕಾಗಲ್ಲ, ಮುಂದಿದ್ರೆ ಏನ್ ಗತಿಯೋ!

ಅವನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ಧೇನೆ ಎಂದು ಅಳಲು ತೋಡಿಕೊಂಡರು. ಘಟನೆಯ ನಂತರ ರಾಜ್‌ಕುಮಾರ್ ಅವರ ಕುಟುಂಬವು ಹಾವನ್ನು ಅಂತ್ಯಕ್ರಿಯೆ ಮಾಡಿತು.