ಸರಕುಸಾಗಣೆ ವಿಮಾನದಲ್ಲಿ ಲಗೇಜುಗಳನ್ನು ತೆರವುಗೊಳಿಸುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ನಿದ್ದೆಗೆ ಜಾರಿದ್ದರಿಂದ ಷಿಕಾಗೊಗೆ ಪ್ರಯಾಣಿಸಿದ್ದಾನೆ.  

ಷಿಕಾಗೊ : ಕುಡುಕರು ಸೃಷ್ಟಿಸುವ ಅವಾಂತರ ಒಂದೆರಡಲ್ಲ. ಸರಕುಸಾಗಣೆ ವಿಮಾನದಲ್ಲಿ ಲಗೇಜುಗಳನ್ನು ತೆರವುಗೊಳಿಸುವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ನಿದ್ದೆಗೆ ಜಾರಿದ್ದರಿಂದ ಷಿಕಾಗೊಗೆ ಪ್ರಯಾಣಿಸಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾರ‍ಯಂಪ್‌ನಲ್ಲಿ ಇಟ್ಟಸರಕುಗಳನ್ನು ತೆರವುಗೊಳಿಸಿದ ಬಳಿಕ ವಿಮಾನ ಖಾಲಿ ಇದ್ದಿದ್ದರಿಂದ ಸಣ್ಣದೊಂದು ನಿದ್ದೆಹೊಡೆಯಲು ನಿರ್ಧರಿಸಿದ.

ಆದರೆ, ಆತ ಹೊರಗೆ ಬಾರದೇ ಇದ್ದಿದ್ದನ್ನು ಯಾರೂ ಗಮನಿಸಿರಲಲ್ಲ. ಹೀಗಾಗಿ ವಿಮಾನ ಟೇಕಾಪ್‌ ಆಗಿ ಷಿಕಾಗೊದ ಓಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಪೊಲೀಸರು ಬಂದು ತಪಾಸಣೆ ನಡೆಸಿದಾಗ ಆತ ತಾನು ಕುಡಿದು ಕುಡಿದು ನಿದ್ದೆ ಹೋಗಿದ್ದಾಗಿ ಹೇಳಿದ್ದಾನೆ. ಈ ಅಪರಾಧಕ್ಕಾಗಿ ಆತನಿಗೆ ವಿಮಾನಯಾನ ಸಂಸ್ಥೆ ದಂಡ ವಿಧಿಸಿಲ್ಲ. ಆದರೆ, ಪ್ರಕರಣ ವಿಚಾರಣೆ ನಡೆದು ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.