ಒಟ್ಟು 48 ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಪ್ರಕರಣಗಳ ಪತ್ತೆಹಚ್ಚಿದ್ದು, 2015 ರಿಂದ 2017 ರವರೆಗೆ ಒಟ್ಟು 23 ಪ್ರಕರಣದಲ್ಲಿ 31 ಮಂದಿ ನೈಜಿರಿಯನ್ ಪ್ರಜೆಗಳ ಬಂಧನ

ಬೆಂಗಳೂರು (ಮಾ.16): ವಿಧಾನಪರಿಷತ್ತಿನಲ್ಲಿ ಇಂದು ಬೆಂಗಳೂರಿನ ಡ್ರಗ್ಸ್ ಮಾಫಿಯಾ ವಿಚಾರ ಪ್ರತಿಧ್ವನಿಸಿತು.

ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸೋಮಣ್ಣ, ನೈಜಿರಿಯನ್ ದಂಪತಿಯ ಮಕ್ಕಳು ಶಾಲಾ ಮಕ್ಕಳಿಗೆ ಚಾಕಲೇಟ್ ನೀಡುತ್ತಿದ್ದಾರೆ. ಚಾಕಲೇಟ್ ತಿಂದ ಮಕ್ಕಳು ಸ್ಥಿಮಿತ ಕಳೆದುಕೊಳ್ಳುತ್ತಾರೆ. ಹೀಗಾಗಿ ಆ ದಂಪತಿಯನ್ನು ಗಡಿಪಾರು ಮಾಡಬೇಕೆಂದು ವಿ. ಸೋಮಣ್ಣ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಮಾದಕ ವಸ್ತು ಜಾಲ ಬೆಳೆಯುವುದಕ್ಕೆ ನಾವು ಬಿಡುವುದಿಲ್ಲ ಎಂದರು.

ಒಟ್ಟು 48 ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಪ್ರಕರಣಗಳ ಪತ್ತೆಹಚ್ಚಿದ್ದು, 2015 ರಿಂದ 2017 ರವರೆಗೆ ಒಟ್ಟು 23 ಪ್ರಕರಣದಲ್ಲಿ 31 ಮಂದಿ ನೈಜಿರಿಯನ್ ಪ್ರಜೆಗಳ ಬಂಧಿಸಿರೋದಾಗಿ ಅವರು ಹೇಳಿದರು.