ಬೆಂಗಳೂರು(ಅ.07): ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ  ವಾಹನ ಸವಾರರಿಗೆ ಪೂರ್ವ ವಿಭಾಗದ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.  ವಿವಿಧ ದೂರುಗಳನ್ನು ದಾಖಲಿಸುವ ಮೂಲಕ  ಒಟ್ಟು  1381 ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.

ಇನ್ನು ಕಳೆದ ಹಲವಾರು ದಿನಗಳಿಂದ ಸಂಚಾರಿ ಪೊಲೀಸರು ಸ್ಪೆಷಲ್​​​ ಡ್ರೈವ್​​​ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಘಂನೆ ಮಾಡಿ ರಸ್ತಿಗಿಳಿಯುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅದರಂತೆ  ಕಳೆದ ದಿನ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ರಸ್ತಿಗಿಳಿದಿದ್ದ  270 ಖಾಸಗಿ ಬಸ್ಸುಗಳು, 713 ಟಿಟಿ ವಾಹನಗಳು ಸೇರಿದ್ದಂತೆ 398 ಕ್ಯಾಬ್​​​ಗಳನ್ನು  ಪೂರ್ವ ವಿಭಾಗ ಸಂಚಾರಿ ಪೊಲೀಸ್ರು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.