ಈತ ಬೆನಕನ ಕೆರೆಯಿಂದ ತುರುವೇಕೆರೆಗೆ ಬಸ್ ಚಲಾಯಿಸುತ್ತಿದ್ದ.

ತುರುವೇಕೆರೆ(ನ.20): ಇಲ್ಲಿನ ಬೆನಕನ ಕೆರೆ-ತುರುವೆಕೆರೆ ಮಾರ್ಗದ ಚಾಲಕ ತಮ್ಮ ಸಾವಿನಲ್ಲಿ ಸಾರ್ಥಕತೆ ಮೆರೆದು 40 ಮಂದಿಯ ಪ್ರಾಣ ಉಳಿಸಿದ್ದಾನೆ.

40 ಮಂದಿಯ ಪ್ರಾಣ ಉಳಿಸಿದ ಪುಣ್ಯಾತ್ಮ ಚಾಲಕನ ಹೆಸರು ಕೃಷ್ಣ. ಈತ ಬೆನಕನ ಕೆರೆಯಿಂದ ತುರುವೇಕೆರೆಗೆ ಬಸ್ ಚಲಾಯಿಸುತ್ತಿದ್ದ. ದೇವಿಹಳ್ಳಿ ಗೇಟ್ ಬಳಿ ಚಲಾಯಿಸುತ್ತಿದ್ದಾಗ ಚಾಲಕ ಕೃಷ್ಣ'ಗೆ ಹೃದಯಾಘಾತವಾಗಿದೆ. ತನ್ನ ನೋವನ್ನು ಅರಿತ ಆತ ತಕ್ಷಣ ಬಸ್ ನಿಲ್ಲಿಸಿದ್ದಾನೆ.

ನಂತರ ಕೆಲವು ಕ್ಷಣಗಳಲ್ಲಿ ಈತನ ಪ್ರಾಣ ಹೋಗಿದೆ. ತನ್ನ ಪ್ರಾಣ ಕೊಟ್ಟು ಜೀವ ತ್ಯಾಗ ಮಾಡಿದ ಚಾಲಕನಿಗೆ ಬಸ್'ನಲ್ಲಿದ ಪ್ರಯಾಣಿಕರು ಕಂಬಿನಿ ಮಿಡಿದರು.

(ಕಾಲ್ಪನಿಕ ಚಿತ್ರ)