ಮಾನವೀಯತೆ ಮೆರೆದ ಆ್ಯಂಬುಲೆನ್ಸ್ ಚಾಲಕ

Driver Helps To Accident Victims
Highlights

ಚಿಕ್ಕಮಗಳೂರಿನಲ್ಲಿ ಆ್ಯಂಬುಲೆನ್ಸ್ ಚಾಲಕನೋರ್ವ ಮಾನವೀಯತೆ ಮೆರೆದು ಅಪಘಾತದಿಂದ ಒದ್ದಾಡುತ್ತಿದ್ದವರನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  

ಚಿಕ್ಕಮಗಳೂರು : ಖಾಸಗಿ ಆ್ಯಂಬುಲೆನ್ಸ್ ಚಾಲಕನೋರ್ವ ಮಾನವೀಯತೆ ಮೆರೆದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರಿನ ಉಪ್ಪಳ್ಳಿ ನಿವಾಸಿ ಜಿಶಾನ್ ಅಸಾದ್  ಎನ್ನುವ ಆ್ಯಂಬುಲೆನ್ಸ್  ಚಾಲಕ  ಅಪಘಾತದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದವರ ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಲು ಬಿಡಿಗಾಸನ್ನು ಪಡೆಯದೇ ನೆರವು ನೀಡಿದ್ದಾರೆ. 

ಕೆ.ಎಸ್.ಅರ್.ಟಿ.ಸಿ ಬಸ್ ಮತ್ತು ಮಿನಿ ಟೆಂಪೊ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಘಟನೆಯಲ್ಲಿ ಟೆಂಪೊದಲ್ಲಿದ್ದ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.  

ಘಟನೆ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ವೇಳೆ ಗಾಯಾಳುಗಳು ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರು. ಕೂಡಲೇ ಜಿಶಾನ್ ಸ್ಥಳಕ್ಕೆ ಬಂದು  ಗಾಯಾಳುಗಳನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸಹಾಯ ಹಸ್ತ ಚಾಚಿದ್ದಾರೆ. 

loader