ಕೆಎಸ್​​ಆರ್​ಟಿಸಿ ಬಸ್​ ಚಾಲಕ ಹಾರನ್ ಮಾಡಿದ್ದಕ್ಕೆ ಚಾಲಕನಿಗೆ ಥಳಿಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ತೆಂಡೆಕೆರೆ ಗ್ರಾಮದ ಬಳಿ ನಡೆದಿದೆ. ಕಿಡಿಗೇಡಿಗಳಿಂದ ಹಲ್ಲೆಗೆ ಒಳಗಾಗಿದ್ದ ಬಸ್ ಚಾಲಕ ಪ್ರಕಾಶ್​ಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡ್ಯ(ಡಿ.10): ಕೆಎಸ್​​ಆರ್​ಟಿಸಿ ಬಸ್​ ಚಾಲಕ ಹಾರನ್ ಮಾಡಿದ್ದಕ್ಕೆ ಚಾಲಕನಿಗೆ ಥಳಿಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ತೆಂಡೆಕೆರೆ ಗ್ರಾಮದ ಬಳಿ ನಡೆದಿದೆ.

ಕಿಡಿಗೇಡಿಗಳಿಂದ ಹಲ್ಲೆಗೆ ಒಳಗಾಗಿದ್ದ ಬಸ್ ಚಾಲಕ ಪ್ರಕಾಶ್​ಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಚಾಲಕನಿಗೆ ಹಲ್ಲೆ ಮಾಡಿದ ಅಂಚೆಮುದ್ದನಹಳ್ಳಿ ಗ್ರಾಮದ ಚೇತನ್ ಮತ್ತು ಆತನ ಬೆಂಬಲಿಗರ ವಿರುದ್ಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆಬಿಸಿದ್ದಾರೆ.