ಕೊಪ್ಪಳ (ನ.20): ಕೊಪ್ಪಳದ 13ನೇ ವಾರ್ಡ್​​​ ಜನ ಇವತ್ತು ಅಕ್ಷರಶಃ ಕೆರಳಿ ಕೆಂಡವಾಗಿದ್ದರು. ಯಾಕಂದರೆ, ಕುಡಿಯುವ ನೀರು ಬರಬೇಕಿದ್ದ ನಲ್ಲಿಯಲ್ಲಿ ಚರಂಡಿ ನೀರು ಬಂದಿದೆ.

13 ನೇ ವಾರ್ಡ್ ಕೋಟೆ ಏರಿಯಾದ ಹಲವೆಡೆ ಕೊಳಾಯಿಗಳಲ್ಲಿ ಕೆಲ ದಿನಗಳಿಂದ ದುರ್ವಾಸನೆಯ ನೀರು ಬರುತ್ತಿದೆ.  ಬೆಳಗ್ಗೆಯೂ ನಲ್ಲಿಯಲ್ಲಿ  ಕಲ್ಮಶ ನೀರು ಸರಬರಾಜು ಆಗಿದೆ. ಕೊಳಕು ಮಿಶ್ರಿತ ನೀರು ಬಿಟ್ಟಿರುವುದಕ್ಕೆ ನಗರಸಭೆ ವಿರುದ್ಧ ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ.

ಪೈಪ್ ಒಡೆದ ಪರಿಣಾಮ ನಲ್ಲಿಯಲ್ಲಿ ಚರಂಡಿ ನೀರು ಬರುತ್ತಿರುವ ಶಂಕೆ ವ್ಯಕ್ತವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶುದ್ಧ ನೀರು ಬೀಡಬೇಕು ಅಂತ ಸ್ಥಳೀಯರು ಬೀದಿಗಿಳಿದು ಆಗ್ರಹಿಸಿದ್ದಾರೆ.