ಕನ್ನಡದ ಮೇರು ನಟ ದಿ. ಡಾ. ವಿಷ್ಣುವರ್ಧನ್  ರಾಷ್ಟ್ರೀಯ ಉತ್ಸವ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ.

ನವದೆಹಲಿ: ಕನ್ನಡದ ಮೇರು ನಟ ದಿ. ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿದೆ.

ಡಾ. ವಿಷ್ಣು ಸೇನಾ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತದಲ್ಲಿಯೇ ಪ್ರಥಮ ಬಾರಿಗೆ ಕಲಾವಿದನೊಬ್ಬನ ಸ್ಮರಣಾರ್ಥ ರಾಷ್ಟ್ರೀಯ ಉತ್ಸವ ನವದೆಹಲಿಯಲ್ಲಿ ನಡೆಯುತ್ತಿದೆ.

ಈ ಮೂಲಕ ಸ್ಯಾಂಡಲ್​'ವುಡ್ ಮೇರು ನಟ ವಿಷ್ಣುವರ್ಧನ್ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಮರಿಸಲಾಗುತ್ತಿದ್ದು, ವಿಷ್ಣು ಅಭಿಮಾನಿಗಳು ಸೇರಿದಂತೆ ಗಣ್ಯರು ಭಾಗ ವಹಿಸಲಿದ್ದಾರೆ.