ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ವೈದ್ಯರ ನಡುವೆ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ವಿರುದ್ಧ  ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ  ಡಾ. ರವೀಂದ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ನ.15): ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ವೈದ್ಯರ ನಡುವೆ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮನ್ನು ಕೊಲೆಗಡುಕರು ಅಂದ್ರು ಅಂತಾ ಹೇಳಿ ನೀವು ಕಣ್ಣೀರು ಹಾಕಿದ್ರಿ. ಡಾಕ್ಟರ್'ಗಳನ್ನು ಪಿಕ್ ಪಾಕೇಟರ್ಸ್, ಕೊಲೆಗಡುಕರು, ದರೋಡೆಕೋರರು ಅಂತ ಕರೆದಿದ್ದೀರಿ. ನಿಮ್ಮನ್ನು ಕೊಲೆಗಡುಕರು ಅಂದಿದಕ್ಕೆ ನಿಮ್ ಮಕ್ಕಳು ಕೇಳಿದ್ದಾರೆ. ನಮ್ಮನ್ನು ನಮ್ಮ ಮಕ್ಕಳು ಕೇಳುತ್ತಿದ್ದಾರೆ, ನಮ್ಮ ಮಕ್ಕಳಿಗೆ ನಾವೇನು ಉತ್ತರ ಕೊಡಬೇಕು? ನಾಲಿಗೆ ಮೇಲೆ ಹಿಡಿತ ಇಲ್ಲ ಅಂದ್ರೆ ಭ್ರಮೆಗೆ ಬಿದ್ದರೆ ಹೀಗೆಲ್ಲ ವ್ಯತ್ಯಾಸಗಳಾಗುತ್ತವೆ. ಕಣ್ಣೀರೇನು ಗ್ಲೀಸರಿನ್ ಹಾಕಿದರೂ ಬರುತ್ತೆ. ಅದೆಲ್ಲ ಅಲ್ಲ. ಎದೆಯಿಂದ ಬರಬೇಕು ಎಂದು ಡಾ.ರವೀಂದ್ರ ಸಚಿವರಿಗೆ ಚಾಟಿ ಬೀಸಿದ್ದಾರೆ.

ನಾನು ಮನುಷ್ಯನಾಗಿದ್ದಕ್ಕೆ ಈಗಲೂ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಮುಷ್ಕರಕ್ಕೆ ಕರೆದಿಲ್ಲ. ನೀವು ಕೃತಜ್ಞತೆ ಸಲ್ಲಿಸೋ ಬದಲು ಬೀದಿಗೆ ತಳ್ಳುವ ಪ್ರಯತ್ನ ಮಾಡಿದ್ರಿ. ಈ ಕಾನೂನನ್ನು ಯಥಾವತ್ತಾಗಿ ಜಾರಿಗೆ ತರುವುದಾದರೆ ಇಂಥ ವ್ಯವಸ್ಥೆಯಲ್ಲಿ ಇರೋಕಾಗದೇ ಸಾಯೋದೇ ಉತ್ತಮ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ನಿಲ್ಲಲ್ಲ. ಮುಂದುವರೆಯುತ್ತದೆ ಎಂದು ಬೆಳಗಾವಿಯಲ್ಲಿ ಡಾ. ರವೀಂದ್ರ ಹೇಳಿದ್ದಾರೆ.