ಡಾ. ರಾಜ್ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಬೆಳಿಗ್ಗೆಯಿಂದಲೂ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ತಮ್ಮ ನಟ ಸೌರ್ವಭೌಮನ ಸ್ಮರಣೆ ಮಾಡುತ್ತಿದ್ದಾರೆ.ಬೆಳಗ್ಗೆ 11 ಗಂಟೆ ಹೊತ್ತಿಗೆ ಸದಾಶಿವನಗರದ ಮನೆಯಲ್ಲಿ ಪುಣ್ಯತಿಥಿ ಕಾರ್ಯಗಳೂ ನಡೆಯಲಿವೆ.
ಬೆಂಗಳೂರು(ಏ.12): ವರನಟ ಡಾ. ರಾಜ್‌ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 11 ವರ್ಷ ಸಂದಿದೆ. ಅಭಿಮಾನಿಗಳಿಗೆ ದೇವರೆ ಆದ ಅಣ್ಣಾವ್ರ 11ನೇ ಪುಣ್ಯ ತಿಥಿ ಸ್ಮರಣೆ ಕಾರ್ಯಕ್ರಮವನ್ನು ಇಂದು ರಾಜ್ಯಾಧ್ಯಂತ ಅಭಿಮಾನಿಗಳು ನೆರವೆರಿಸುತ್ತಿದ್ದಾರೆ.
ಡಾ. ರಾಜ್ ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಬೆಳಿಗ್ಗೆಯಿಂದಲೂ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ತಮ್ಮ ನಟ ಸೌರ್ವಭೌಮನ ಸ್ಮರಣೆ ಮಾಡುತ್ತಿದ್ದಾರೆ.ಬೆಳಗ್ಗೆ 11 ಗಂಟೆ ಹೊತ್ತಿಗೆ ಸದಾಶಿವನಗರದ ಮನೆಯಲ್ಲಿ ಪುಣ್ಯತಿಥಿ ಕಾರ್ಯಗಳೂ ನಡೆಯಲಿವೆ.
ಪ್ರತಿ ವರ್ಷದಂತೆ ಎಂದಿನಂತೆ ತಂದೆಯ ಸಮಾಧಿಗೆ ರಾಜ್ ಮಕ್ಕಳು ಮೊಮ್ಮಕ್ಕಳು ಪೂಜೆ ಸಲ್ಲಿಸಲಿದ್ದಾರೆ. ಕುಟುಂಬ ವರ್ಗದ ಎಲ್ಲಾ ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.ಅಂಧರಿಗೆ ಕಣ್ಣು ಕೊಟ್ಟು ರಾಜ್‌ಕುಮಾರ್ ಕಣ್ಣಪ್ಪ ಆದ, ಅಭಿಮಾನಿ ದೇವರುಗಳೇ ಎಂದು ಸಂಭೋಧಿಸುವ ಈ ಮಹಾನ್ ನಾಯಕ ನಟ ಕನ್ನಡಿಗರ ಕಣ್ಮಣಿ ಇಂದು ನಮ್ಮ ಜೊತೆ ಜೀವಂತ ವಾಗಿ ಇಲ್ಲದೆ ಇದ್ದರೂ ಅಬಾಲ ವ್ರದ್ಧರ ಮನಸ್ಸಿನಲ್ಲಿ ಆಕರ್ಷಣೆಯ ನಟನಾಗಿ ಇಂದೀಗೂ ಉಳಿದಿದ್ದಾರೆ.