ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಗೂ ಮುನ್ನವೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಜ್ಯೋತಿಷಿ ಹಾಗೂ ಕಟ್ಟಾ ಹಿಂದೂವಾದಿಯಾಗಿರುವ ಡಾ. ಭಾನುಪ್ರಕಾಶ್ ಶರ್ಮಾರನ್ನು ಕಣಕ್ಕಿಳಿಸಲು ಮುಂದಾಗಿದೆ. ಸಂಘಪರಿವಾರದ ಮೂಲಕ ಒಂದೆರಡು ಸುತ್ತಿನ ಮಾತುಕತೆ ನಡೆಸಿದೆ ಅಂತ ಹೇಳಲಾಗುತ್ತಿದೆ.
ಮಂಡ್ಯ(ಅ.20): ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಗೂ ಮುನ್ನವೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇದೀಗ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಜ್ಯೋತಿಷಿ ಹಾಗೂ ಕಟ್ಟಾ ಹಿಂದೂವಾದಿಯಾಗಿರುವ ಡಾ. ಭಾನುಪ್ರಕಾಶ್ ಶರ್ಮಾರನ್ನು ಕಣಕ್ಕಿಳಿಸಲು ಮುಂದಾಗಿದೆ. ಸಂಘಪರಿವಾರದ ಮೂಲಕ ಒಂದೆರಡು ಸುತ್ತಿನ ಮಾತುಕತೆ ನಡೆಸಿದೆ ಅಂತ ಹೇಳಲಾಗುತ್ತಿದೆ.
ಇತ್ತೀಚೆಗಷ್ಟೆ ಶ್ರೀರಂಗಪಟ್ಟಣದಲ್ಲಿ ಯಶಸ್ವಿಯಾಗಿ ಕಾವೇರಿ ಪುಷ್ಕರ ನಡೆಸಿ ಲಕ್ಷಾಂತರ ಭಕ್ತಗಣದಲ್ಲಿ ಹೆಸರು ಮಾಡಿರುವ ಡಾ.ಭಾನುಪ್ರಕಾಶ್ ಶರ್ಮಾರನ್ನು ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಆದರೆ ಈ ಬಗ್ಗೆ ಡಾ. ಭಾನು ಪ್ರಕಾಶ್ ಮಾತ್ರ, ನಾನು ಸದ್ಯಕ್ಕೆ ಧಾರ್ಮಿಕ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಮುಂದಿನ ದಿನಗಳಲ್ಲಿ ಜನರ ಅಭಿಪ್ರಾಯ ಪಡೆದು ಪ್ರತಿಕ್ರಿಯಿಸುವುದಾಗಿ ಹೇಳೋ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.
