ಗಣಿನಾಡು ಬಳ್ಳಾರಿಯಲ್ಲಿ ಹಣದ ಆಸೆಗಾಗಿ ಪತ್ನಿಗೆ ಕಿರುಕುಳ ನೀಡಿ ಆಸೀಡ್ ಕುಡಿಸಿದ್ದ ಪಾಪಿ ಪೊಲೀಸ್ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ.ಪೇದೆ ವೆಂಕಟೇಶ್ ಎಂಬಾತ ಆಶಾ ಎನ್ನುವ ಮಹಿಳೆಯನ್ನ ಮದುವೆಯಾಗಿ ಆರೇ ತಿಂಗಳಲ್ಲಿ ಹಣದ ಆಸೆಯಿಂದ ಕಿರುಕುಳ ನೀಡುತ್ತಿದ್ದ. ಹಣ ತರುವಂತೆ ದಿನನಿತ್ಯ ಪೀಡಿಸುತಿದ್ದ. ಇದಕ್ಕೆ ವಿರೋಧಿಸಿದ್ದ ಪತ್ನಿಗೆ ಆಸಿಡ್ ಕುಡಿಸಿ ನಾಪತ್ತೆಯಾಗಿದ್ದ. ಆಸಿಡ್ ದಾಳಿಯಿಂದ ನರಕಯಾತನೆ ಅನುಭವಿಸುತ್ತಿರುವ ಆಶಾ ಆಹಾರಸೇವಿಸಲು ಆಗದ ಸ್ಥಿತಿಯಲ್ಲಿದ್ದಾರೆ.
ಬಳ್ಳಾರಿ(ಅ.21): ಗಣಿನಾಡು ಬಳ್ಳಾರಿಯಲ್ಲಿ ಹಣದ ಆಸೆಗಾಗಿ ಪತ್ನಿಗೆ ಕಿರುಕುಳ ನೀಡಿ ಆಸೀಡ್ ಕುಡಿಸಿದ್ದ ಪಾಪಿ ಪೊಲೀಸ್ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ.ಪೇದೆ ವೆಂಕಟೇಶ್ ಎಂಬಾತ ಆಶಾ ಎನ್ನುವ ಮಹಿಳೆಯನ್ನ ಮದುವೆಯಾಗಿ ಆರೇ ತಿಂಗಳಲ್ಲಿ ಹಣದ ಆಸೆಯಿಂದ ಕಿರುಕುಳ ನೀಡುತ್ತಿದ್ದ. ಹಣ ತರುವಂತೆ ದಿನನಿತ್ಯ ಪೀಡಿಸುತಿದ್ದ. ಇದಕ್ಕೆ ವಿರೋಧಿಸಿದ್ದ ಪತ್ನಿಗೆ ಆಸಿಡ್ ಕುಡಿಸಿ ನಾಪತ್ತೆಯಾಗಿದ್ದ. ಆಸಿಡ್ ದಾಳಿಯಿಂದ ನರಕಯಾತನೆ ಅನುಭವಿಸುತ್ತಿರುವ ಆಶಾ ಆಹಾರಸೇವಿಸಲು ಆಗದ ಸ್ಥಿತಿಯಲ್ಲಿದ್ದಾರೆ.
ಈ ಬಗ್ಗೆ ಸುವರ್ಣ ನ್ಯೂಸ್ ವಿಸೃತ ವರದಿ ಪ್ರಸಾರಮಾಡಿತ್ತು. ಆದ್ರೆ ಪೊಲೀಸರು ಪೊಲೀಸಪ್ಪನ ವಿರುದ್ಧ ಕ್ರಮ ಕೈಗೊಳ್ಳದೆ ಆಶಾ ಕುಟುಂಬಕ್ಕೆ ಬಳ್ಳಾರಿಯಿಂದ 60 ಕಿಲೋಮೀಟರ್ ದೂರವಿರುವ ಕಂಪ್ಲಿ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದು ನೊಂದ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ನಡೆದದ್ದು ಬಳ್ಳಾರಿ ನಗರದಲ್ಲಿ ಆದ್ರೆ ಕಂಪ್ಲಿ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದಾರೆ. ಹೀಗಾಗಿ ನೊಂದ ಕುಟುಂಬ ನ್ಯಾಯಕ್ಕಾಗಿ ಮೊರೆ ಇಡುತ್ತಿದೆ.
